
ಘಟನೆಯ ವಿವರ: ಬಂಕಾ ಜಿಲ್ಲೆಯ ಗ್ರಾಮವೊಂದರ ಸಿಕಂದರ್ ಯಾದವ್ ಎಂಬಾತ ಕೆಲ ವರ್ಷಗಳ ಹಿಂದೆ ದಿಲೇಶ್ವರ್ ಮತ್ತು ಗೀತಾದೇವಿ ದಂಪತಿಯ ಪುತ್ರಿಯನ್ನು ವಿವಾಹವಾಗಿದ್ದ. ಇವರುಗಳಿಗೆ ಇಬ್ಬರು ಮಕ್ಕಳು ಸಹ ಇದ್ದರು. ಆದರೆ ಕೆಲ ಸಮಯದ ಹಿಂದೆ ಸಿಕಂದರ್ ಯಾದವ್ ಪತ್ನಿ ಮೃತಪಟ್ಟಿದ್ದಳು.
ಪತ್ನಿ ಸಾವಿನ ಬಳಿಕ ಸಿಕಂದರ್, ತನ್ನ ಇಬ್ಬರು ಮಕ್ಕಳೊಂದಿಗೆ ಅತ್ತೆ – ಮಾವನ ಮನೆಯಲ್ಲಿಯೇ ನೆಲೆಸಿದ್ದು, ಇದರ ಮಧ್ಯೆ ಗೀತಾದೇವಿ ಜೊತೆ ಸಿಕಂದರ್ ಗೆ ಪ್ರೇಮಾಂಕುರವಾಗಿದೆ. ಇಬ್ಬರ ನಡುವಿನ ಅನೈತಿಕ ಸಂಬಂಧ ಸಿಕಂದರ್ ಮಾವ ದಿಲೇಶ್ವರ್ ಗಮನಕ್ಕೂ ಬಂದಿದೆ.
ದಿಲೇಶ್ವರ್ ಈ ವಿಚಾರವನ್ನು ಗ್ರಾಮದ ಮುಖಂಡರ ಮುಂದೆ ಇಟ್ಟಿದ್ದು, ಈ ಸಂದರ್ಭದಲ್ಲಿ ಸಿಕಂದರ್ ತಾನು ಗೀತಾದೇವಿಯನ್ನು ಮದುವೆಯಾಗುವುದಾಗಿ ಘೋಷಿಸಿದ್ದಾನೆ. ಇದಕ್ಕೆ ದಿಲೇಶ್ವರ್ ಹಾಗೂ ಗ್ರಾಮದ ಮುಖಂಡರು ಸಹ ಒಪ್ಪಿಕೊಂಡಿದ್ದು, ಅಂತಿಮವಾಗಿ ವಿವಾಹದಲ್ಲಿ ಈ ಪ್ರಕರಣ ಸುಖಾಂತ್ಯವಾಗಿದೆ.