
ಗರ್ಭಿಣಿ ಪತ್ನಿಯನ್ನು ಹೆರಿಗೆಗೆಂದು ಆಸ್ಪತ್ರೆಗೆ ದಾಖಲಿಸಲು ಬಂದಿದ್ದ ಪತಿ ಆಸ್ಪತ್ರೆಯ ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿ ಬಂಧಿಯಾಗಿದ್ದಾನೆ.
ಹಾಜಿಪುರದ ಸದರ್ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ಆರೋಪಿ ಪ್ರತೀಕ್ ಎಂಬಾತ ತನ್ನ ಗರ್ಭಿಣಿ ಪತ್ನಿಯನ್ನು ಹೆರಿಗೆಗೆ ಕರೆದುಕೊಂಡು ಹೋಗಿದ್ದ. ಆಕೆಯನ್ನು ವಾರ್ಡ್‌ಗೆ ದಾಖಲಿಸಲಾಗಿದ್ದು, ಆರೋಪಿ ಆಸ್ಪತ್ರೆಯ ಹೊರಗೆ ತಿರುಗಾಡುತ್ತಿದ್ದ.
ಆರೋಪಿಯು ತನ್ನೊಂದಿಗೆ ಚೆಲ್ಲಾಟವಾಡಲು ಪ್ರಯತ್ನಿಸುತ್ತಿದ್ದನು. ತಾನು ಸ್ವೀಟ್ ಅಂಗಡಿಯ ಮಾಲೀಕನೆಂದು ಮತ್ತು ಸಿಹಿ ತಿನ್ನುವಂತೆ ಒತ್ತಾಯಿಸುತ್ತಿದ್ದ ಎಂದು ಆಸ್ಪತ್ರೆಯ ಹೊರಗೆ ಭದ್ರತೆಯಲ್ಲಿ ನಿಯೋಜಿಸಲಾದ ಮಹಿಳೆ ಹೇಳಿದ್ದಾರೆ. ಮಹಿಳೆ ಆತನ ವರ್ತನೆಯನ್ನು ವಿರೋಧಿಸಿ ಎಚ್ಚರಿಕೆ ನೀಡಿದ್ದರು. ಈ ವೇಳೆ ಆರೋಪಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದು ಆಸ್ಪತ್ರೆ ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದಾನೆ.
ಆಸ್ಪತ್ರೆಯ ಸಿವಿಲ್ ಸರ್ಜನ್ ಸ್ಥಳಕ್ಕೆ ಆಗಮಿಸಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ.