ಆಕೆ ಶಾಲೆಗೆ ಹೋಗುವ ವಿದ್ಯಾರ್ಥಿನಿ. ಆಟ-ಪಾಠದಲ್ಲಿ ಸದಾ ಮುಂದು. ಅಷ್ಟೇ ಗಟ್ಟಿಗಿತ್ತಿ ಕೂಡಾ. ಇತ್ತೀಚೆಗೆ ಶಾಲೆಗೆ ಬಂದ ತಪಾಸಣಾ ಅಧಿಕಾರಿಗಳಿಗೇನೆ ಚಪ್ಪಲಿ ತೋರಿಸಿದ್ದಾಳೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಈ ಘಟನೆ ನಡೆದಿರೋದು ಬಿಹಾರದ ಛಾತಾಪುರ ಅನ್ನೋ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ. ಇಲ್ಲಿನ ಶಾಲೆಗೆ ಶಿಕ್ಷಣಾಧಿಕಾರಿ ರಾಹುಲ್ ಚಂದ್ರ ಪ್ರತಿವರ್ಷದಂತೆ ಈ ವರ್ಷವೂ ಭೇಟಿ ನೀಡಿದ್ದಾರೆ. ಪ್ರತಿ ತರಗತಿಗೆ ಹೋಗಿ ಅಲ್ಲಿರುವ ಸಮಸ್ಯೆ ಕುರಿತು ವಿಚಾರಣೆ ನಡೆಸುತ್ತಿರುವಾಗ, ವಿದ್ಯಾರ್ಥಿನಿ ಗುಂಪಲ್ಲಿರೋ ವಿದ್ಯಾರ್ಥಿನಿ ಒಮ್ಮಿಂದೊಮ್ಮೆ ಡಿಪಿಓ ಮುಂದೆ ಹೋಗಿ ಚಪ್ಪಲಿ ಹಿಡಿದಿದ್ದಾಳೆ. ಇದೇ ಶಾಲೆಯ ಶಿಕ್ಷಕರಾಗಿರೋ ರಮೇಶ್ಕುಮಾರ್ ರಮಣ್ ಅವರ ತಡೆಹಿಡಿದಿಡಲಾಗಿರೋ ವೇತನವನ್ನ ಕೊಡದಿರೋದಕ್ಕೆ ಈ ವಿದ್ಯಾರ್ಥಿನಿ ಈ ರೀತಿಯಾಗಿ ತನ್ನ ಕೋಪವನ್ನ ತೋರಿಸಿದ್ದಾಳೆ.
ವಿದ್ಯಾರ್ಥಿನಿಯ ಈ ವರ್ತನೆಯ ಹಿಂದಿರೋ ಕಾರಣವನ್ನ, ಡಿಪಿಓ ರಾಹುಲ್ಚಂದ್ರ ತಾಳ್ಮೆಯಿಂದ ನೋಡಿ, ಕೊನೆಗೆ ಕಾರಣ ಏನು ಅನ್ನೋದನ್ನ ಕೇಳಿ ಆದಷ್ಟು ಬೇಗ ಈ ಸಮಸ್ಯೆಯನ್ನ ಬಗೆಹರಿಸುತ್ತೇನೆ ಅಂತ ಹೇಳಿ ಅಲ್ಲಿಂದ ಹೊರಟು ಹೋಗಿದ್ದಾರೆ.
ನೀರಿನಿಂದ ಹಾರಿ ಮೀನುಗಾರನ ಗಂಟಲಲ್ಲಿ ಸಿಲುಕಿಕೊಂಡ ಮೀನು; ಆಪರೇಶನ್ ಮಾಡಿ ಜೀವ ಉಳಿಸಿದ ವೈದ್ಯರು
ವೈರಲ್ ಆಗಿರೊ ಈ ವಿಡಿಯೋದಲ್ಲಿ ಡಿಪಿಓಗೆ ಚಪ್ಪಲಿ ತೋರಿಸಿರೋ ವಿದ್ಯಾರ್ಥಿನಿ, ಶಿಕ್ಷಕ ರಮೇಶ್ಕುಮಾರ್ ರಮಣ್(65) ಅವರ ಮಗಳೆಂದು ಹೇಳಲಾಗುತ್ತಿದೆ. ಕೇವಲ ರಮೇಶ್ಕುಮಾರ್ ರಮಣ್ ಅವರ ವೇತನ ಮಾತ್ರ ಅಲ್ಲ, ಇನ್ನೂ 16 ಶಿಕ್ಷಕರು ವೇತನ ಸಿಗದೇ ಪರದಾಡುತ್ತಿದ್ದಾರೆ. ಪ್ರತಿಭಟನೆ ಮಾಡಿದರೂ ಅಧಿಕಾರಿಗಳು, ಈ ಶಿಕ್ಷಕರ ಸಮಸ್ಯೆಯನ್ನ ಯಾರೂ ಕೇಳುತ್ತಿಲ್ಲ.
ಈಗ ಶಿಕ್ಷಕರು ಆಮರಣ ಉಪವಾಸವನ್ನ ಮಾಡುತ್ತಿದ್ದಾರೆ. ಇಲ್ಲಿನ ಶಿಕ್ಷಣ ವಿಭಾಗ ಹೇಳುವ ಪ್ರಕಾರ 2017ರಲ್ಲಿ ಶಿಕ್ಷಕ ರಮೇಶ್ ಕುಮಾರ್ ರಮಣ್ ಇಲ್ಲಿನ ಕಟಹಿ ಶರ್ಮಾ ಟೊಲಾ ವಿದ್ಯಾಲಯದ ಮುಖ್ಯೋಪಾಧ್ಯಾಯರಾಗಿದ್ದರು. ಆ ಸಮಯದಲ್ಲಿ ಮಕ್ಕಳಿಗೆ ಪಠ್ಯ-ಪುಸ್ತಕ-ಸಮವಸ್ತ್ರ ವಿತರಣೆ ಮಾಡಬೇಕಾಗಿತ್ತು. ಆದರೆ ಅವರು ಮಾಡಿರಲಿಲ್ಲ. ಈ ಬಗ್ಗೆ ಕಠಿಣ ಕ್ರಮ ಕೈಗೊಂಡಿದ್ದ ಇಲಾಖೆ ಇವರನ್ನ ಡೆಪ್ಯೂಟೆಶನ್ ಮಾಡಿತ್ತು. ಈ ನಡುವೆ ಶಿಕ್ಷಕ ರಮೇಶ್ಕುಮಾರ್ ರಮಣ್ ಅವರು ಇನ್ನುಳಿದ ಶಿಕ್ಷಕರನ್ನ ಕರೆದುಕೊಂಡು ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ. ಈಗ ಈ ಕುರಿತು ಹೆಚ್ಚಿನ ವಿಚಾರಣೆ ಮಾಡಲಾಗುತ್ತಿದ್ದು, ಸರ್ಕಾರದ ಹಣವನ್ನ ದುರುಪಯೋಗಪಡಿಸಿಕೊಂಡವರ ವಿರುದ್ಧ ಕ್ರಮ ಕೈಗೊಂಡು, ಇನ್ನುಳಿದ ಶಿಕ್ಷಕರ ಬಾಕಿ ಉಳಿದಿರೊ ವೇತನ ಕೊಡುವುದಾಗಿ ಹೇಳಿದೆ.