
ಬೇಗುಸರೈ: ಬಿಹಾರದ ಬೇಗುಸರೈನಲ್ಲಿ ಎಸ್‌ಯುವಿ ಕಾರ್ ರಾಷ್ಟ್ರೀಯ ಹೆದ್ದಾರಿ 31 ರಲ್ಲಿ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು, ಭೀಕರ ಅಪಘಾತದಲ್ಲಿ ವಾಹನದಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಾಹನದಲ್ಲಿದ್ದ ಇತರ ಐದು ಜನರು ಗಂಭೀರವಾಗಿ ಗಾಯಗೊಂಡು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
NH 31 ರ ನಗರ ಪೊಲೀಸ್ ಠಾಣೆ ಪ್ರದೇಶದ ಖಾಟೋಪುರ್ ಚೌಕ್ ಬಳಿ ಈ ಘಟನೆ ನಡೆದಿದೆ.
ಬೇಗುಸರೈನ ಪಹಾರ್‌ಪುರ್ ಗ್ರಾಮದಿಂದ ಕಾರ್ ನಲ್ಲಿದ್ದವರು ಸಂಬಂಧಿ ಅಭಿಷೇಕ್ ಕುಮಾರ್ ಅವರ ಮದುವೆಗೆ ಸಾಹೇಬ್‌ಪುರ್ ಕಮಲ್‌ಗೆ ಹೋಗಿದ್ದರು. ಇಂದು ಮುಂಜಾನೆ ಹಿಂತಿರುಗುವಾಗ ವಾಹನವು ಅತಿ ವೇಗವಾಗಿ ಚಲಿಸುತ್ತಿದ್ದ ವಾಹನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದೆ. ಡಿಕ್ಕಿ ಎಷ್ಟು ಪ್ರಬಲವಾಗಿತ್ತೆಂದರೆ ಅದು ವಿಭಜಕವನ್ನು ಮುರಿದು ವಾಹನ ಉರುಳಿಬಿದ್ದಿದೆ.
ಗಾಯಾಳುಗಳನ್ನು ತಕ್ಷಣ ಸ್ಥಳೀಯರು ಸಹಾಯ ಮಾಡಿ, ಬೇಗುಸರೈನ ಸದರ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದರು. ಟೈರ್ ಸಿಡಿದು ವಾಹನ ಹೆದ್ದಾರಿಯಲ್ಲಿ ಉರುಳಿ ಬಿದ್ದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ಸದರ್ ಡಿಎಸ್ಪಿ ಸುಬೋಧ್ ಕುಮಾರ್ ದೃಢಪಡಿಸಿದರು.
ಮುಫಾಸಿಲ್ ಪೊಲೀಸ್ ಠಾಣೆ ಪ್ರದೇಶದ ಚಂದನ್ ಮಹಾತೋ ಅವರ ಪುತ್ರ ಅಭಿಷೇಕ್ ಕುಮಾರ್ ಅವರ ವಿವಾಹಕ್ಕಾಗಿ ಸಾಹೇಬ್‌ಪುರ ಕಮಲ್ ಪ್ರದೇಶದ ನ್ಯೂ ಜಾಫರ್ ನಗರಕ್ಕೆ ಮದುವೆಗೆ ಹೋಗಿ ಹಿಂದಿರುಗುವಾಗ ಈ ಘಟನೆ ಸಂಭವಿಸಿದೆ.