ಬಿಹಾರ ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, 243 ಕ್ಷೇತ್ರಗಳಲ್ಲಿ 191 ಕ್ಷೇತ್ರದ ಮತಎಣಿಕೆಯ ಮಾಹಿತಿ ಗೊತ್ತಾಗಿದೆ.
ಮಹಾಘಟಬಂಧನ್ 113, NDA 77 ಹಾಗೂ LJP ಅಭ್ಯರ್ಥಿಗಳು ಒಂದು ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. 243 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ 122 ಸ್ಥಾನಗಳು ಬೇಕಿದ್ದು, ಮಹಾಘಟಬಂಧನ್ ಮೈತ್ರಿಕೂಟ 113 ಕ್ಷೇತ್ರಗಳಲ್ಲಿ ಮುನ್ನಡೆ ಗಳಿಸುವ ಮೂಲಕ ಬಹುಮತದತ್ತ ದಾಪುಗಾಲು ಹಾಕಿದೆ.
ವಿಧಾನಸಭೆ ಚುನಾವಣೆ ಘೋಷಣೆಯಾದ ಸಂದರ್ಭದಲ್ಲಿ ಆಡಳಿತಾರೂಢ ಜೆಡಿಯು –ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೇರುವ ಲಕ್ಷಣವಿತ್ತು. ಮೊದಲ ಹಂತದ ಚುನಾವಣೆ ದಿನ ಸಮೀಪಿಸುತ್ತಿರುವಂತೆಯೇ ಚಿತ್ರಣವೇ ಬದಲಾಗಿತ್ತು. RJD ನಾಯಕ ತೇಜಸ್ವಿ ಯಾದವ್ ತಮ್ಮದೇ ಶೈಲಿಯ ಪ್ರಚಾರದ ಮೂಲಕ ಮತದಾರರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಮಹಾಘಟಬಂಧನ್ ಮೈತ್ರಿಕೂಟ ಮುನ್ನಡೆಯಲ್ಲಿ ಶತಕದ ಗಡಿ ದಾಟಿದ್ದು, ಚುನಾವಣೋತ್ತರ ಸಮೀಕ್ಷೆ ನಿಜವಾಗುವಂತಿದೆ.