ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ರೋಚಕ ಹಂತ ತಲುಪಿ ಸರಳ ಬಹುಮತ ಪಡೆಯುವಲ್ಲಿ ಎನ್.ಡಿ.ಎ. ಯಶಸ್ವಿಯಾಗಿದೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಜೆಡಿಯು-ಬಿಜೆಪಿ ಮೈತ್ರಿ ಕೂಟ ಅಧಿಕಾರದಲ್ಲಿ ಮುಂದುವರೆಯಲಿದೆ. ಎನ್.ಡಿ.ಎ.ಗೆ 125 ಸ್ಥಾನ ದೊರೆತಿದೆ. ಆರ್.ಜೆ.ಡಿ. ನಾಯಕ ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ್ ಮೈತ್ರಿಕೂಟಕ್ಕೆ 110 ಸ್ಥಾನಗಳು ಲಭಿಸಿವೆ.
ಮತ ಎಣಿಕೆ ಆರಂಭವಾದ ಸಂದರ್ಭದಲ್ಲಿ ಆರ್.ಜೆ.ಡಿ. ನೇತೃತ್ವದ ಮಹಾಘಟಬಂಧನ್ ಮುನ್ನಡೆ ಕಾಯ್ದುಕೊಂಡಿದ್ದು, ನಂತರ ಫಲಿತಾಂಶ ಏರುಪೇರಾಗಿ ಎನ್.ಡಿ.ಎ. ಮುನ್ನಡೆ ಕಾಯ್ದುಕೊಂಡಿದ್ದು. ಬಿಜೆಪಿ 74, ಸ್ಥಾನಗಳನ್ನು ಗಳಿಸಿ ಎನ್.ಡಿ.ಎ. ಮೈತ್ರಿಕೂಟದ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಜೆಡಿಯು 43 ಸ್ಥಾನಗಳಲ್ಲಿ ಜಯ ಗಳಿಸಿದೆ. ಮಹಾಘಟಬಂಧನ್ ಮೈತ್ರಿಕೂಟದ ಆರ್.ಜೆ.ಡಿ. 75, ಕಾಂಗ್ರೆಸ್ 19, ಇತರರು 32 ಕ್ಷೇತ್ರಗಳಲ್ಲಿ ಜಯಗಳಿಸಿದ್ದಾರೆ. 243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 122 ಸ್ಥಾನಗಳು ಬೇಕಿದೆ. ಸರಳ ಬಹುಮತ ಪಡೆದ ಎನ್.ಡಿ.ಎ. ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.