ನವದೆಹಲಿ: ದೇಶದ ಗಮನ ಸೆಳದಿದ್ದ ಬಿಹಾರ ವಿಧಾನಸಭೆಯ ಚುನಾವಣೋತ್ತರ ಸಮೀಕ್ಷೆಯ ಮಾಹಿತಿ ಪ್ರಕಟವಾಗಿದ್ದು, ಬಿಹಾರದಲ್ಲಿ ಮಹಾಘಟಬಂಧನ್ ಮೈತ್ರಿಕೂಟ ಅತಿ ಹೆಚ್ಚಿನ ಸ್ಥಾನಗಳನ್ನು ಗಳಿಸುವ ಸಾಧ್ಯತೆ ಇದೆ.
ಆಡಳಿತಾರೂಢ ಜೆಡಿಯು -ಬಿಜೆಪಿ ಮೈತ್ರಿಕೂಟ ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ ಇದೆ. 243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಬಹುಮತಕ್ಕೆ 122 ಮ್ಯಾಜಿಕ್ ನಂಬರ್ ಬೇಕಿದೆ.
ಸಿ – ವೋಟರ್ ಸಮೀಕ್ಷೆಯ ಪ್ರಕಾರ, ಮಹಾಘಟಬಂಧನ್ ಮೈತ್ರಿಕೂಟ 120, NDA 116, LJP 1, ಇತರರು 6 ಕ್ಷೇತ್ರಗಳಲ್ಲಿ ಜಯಗಳಿಸಲಿದ್ದಾರೆ. ಸಿ –ವೋಟರ್ ಸಮೀಕ್ಷೆ ಪ್ರಕಾರ ಅತಂತ್ರ ವಿಧಾನಸಭೆ ಫಲಿತಾಂಶ ಬರುವ ಸಾಧ್ಯತೆ ಇದೆ.
TV 9, ಭಾರತ ವರ್ಷ್ ಸಮೀಕ್ಷೆಯ ಪ್ರಕಾರ, NDA 110 – 120, ಮಹಾಘಟಬಂಧನ್ 115 – 125, LJP 3 -5, ಹಾಗೂ ಪಕ್ಷೇತರರು 10 -15 ಕ್ಷೇತ್ರಗಳಲ್ಲಿ ಜಯಗಳಿಸುವ ಸಾಧ್ಯತೆ ಇದೆ.
ಆರ್.ಜೆ.ಡಿ. ನಾಯಕ ತೇಜಸ್ವಿ ಯಾದವ್ ಈ ಬಾರಿ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ನಡೆಸಿದ ಪ್ರಚಾರ, ಕೈಗೊಂಡ ಕಾರ್ಯತಂತ್ರ ಪ್ರಭಾವ ಬೀರಿದ್ದು, ಮಹಾಘಟಬಂಧನ್ ಮೈತ್ರಿಕೂಟವನ್ನು ಅಧಿಕಾರದತ್ತ ತರುವಲ್ಲಿ ಸಹಕಾರಿಯಾಗಿವೆ. ಸಮೀಕ್ಷೆಯ ಮಾಹಿತಿಯಂತೆ ಮಹಾಘಟಬಂಧನ್ ಅಧಿಕಾರಕ್ಕೆ ಬರುವ ಸಾಧ್ಯತೆ ಇದ್ದು, ಸಿಎಂ ನಿತೀಶ್ ಕುಮಾರ್ ನೇತೃತ್ವದ ಜೆಡಿಯು –ಬಿಜೆಪಿ ಮೈತ್ರಿಕೂಟ ಅಧಿಕಾರ ಕಳೆದುಕೊಳ್ಳಲಿದೆ ಎನ್ನಲಾಗಿದೆ.