
ಬಿಹಾರದ ಶಿಕ್ಷಣ ಸಚಿವ ಚಂದ್ರ ಶೇಖರ್ ಕಳೆದ 15 ವರ್ಷಗಳಿಂದ ಒಂದೇ ಒಂದು ದಿನ ತರಗತಿಗೆ ಬರದೇ ಇದ್ದರೂ ಸಹ ಇಲ್ಲಿನ ಔರಂಗಾಬಾದ್ ಕಾಲೇಜಿನ ಪ್ರಾಧ್ಯಾಪಕರಾಗಿ ಸರ್ಕಾರೀ ಸಂಬಳ ಪಡೆಯುತ್ತಿದ್ದಾರೆ.
ಪೂರ್ಣ ಪ್ರಮಾಣದಲ್ಲಿ ರಾಜಕೀಯಕ್ಕೆ ಬರುವ ಮುನ್ನ ಆರ್‌ಜೆಡಿ ಶಾಸಕ ಔರಂಗಾಬಾದ್‌ನ ರಾಮ್ ಲಖನ್ ಸಿಂಗ್ ಯಾದವ್ ಕಾಲೇಜಿನಲ್ಲಿ ಪ್ರಾಣಿಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದರು.
ಮಧೇಪುರ ಸದರ್‌ನಿಂದ ಕಳೆದ ಮೂರು ಅವಧಿಗಳಿಂದಲೂ ಶಾಸಕರಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ ಚಂದ್ರ ಶೇಖರ್. 1985ರ ಅಕ್ಟೋಬರ್ 8ರಿಂದ ಈ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ಚಂದ್ರ ಶೇಖರ್, 2026ರಲ್ಲಿ ನಿವೃತ್ತಿಯಾಗಲಿದ್ದಾರೆ.
2010 ವಿಧಾನ ಸಭಾ ಚುನಾವಣೆಯಲ್ಲಿ ಚಂದ್ರಶೇಖರ್ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು.