ಇತ್ತೀಚೆಗೆ ಪ್ರಕಟಗೊಂಡ UPSC ಪರೀಕ್ಷಾ ಫಲಿತಾಂಶದಲ್ಲಿ ರ್ಯಾಂಕ್ ಪಡೆದವರು ಅನೇಕ ಜನರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಇಂತಹ ಪ್ರೇರಣಾದಾಯಕ ಕತೆಗಳಲ್ಲಿ ದಿವ್ಯಾ ಶಕ್ತಿ ಎಂಬ ಬಿಹಾರದ ಯುವತಿಯ ಯಶೋಗಾಥೆಯೂ ಸೇರಿದೆ. ಈ ಯುವತಿ ಎರಡನೇ ಬಾರಿ UPSC ಪರೀಕ್ಷೆಯಲ್ಲಿ ರ್ಯಾಂಕ್ ಪಡೆದಿದ್ದಾರೆ.
2019 ರಲ್ಲಿ ನಡೆದ ಪರೀಕ್ಷೆಯಲ್ಲಿ ಈಕೆ 79 ನೇ ರ್ಯಾಂಕ್ ಗಳಿಸಿ ಐಪಿಎಸ್ ಅಧಿಕಾರಿಯಾಗಿ ನೇಮಕಗೊಂಡಿದ್ದರು. ಆದರೆ, ಐಪಿಎಸ್ ಅಧಿಕಾರಿಗಿಂತ ಐಎಎಸ್ ಅಧಿಕಾರಿಯಾಗಬೇಕೆಂಬುದು ಆಕೆಯ ಮಹದಾಸೆಯಾಗಿತ್ತು. ಈ ಆಸೆಯನ್ನು ಈಡೇರಿಸಿಕೊಳ್ಳಲೆಂದು ಮತ್ತೆ 2022 ರಲ್ಲಿ ಪರೀಕ್ಷೆಗೆ ತನ್ನ ಪೊಲೀಸ್ ತರಬೇತಿ ಜೊತೆ ಜೊತೆಯಲ್ಲೇ ತಯಾರಿ ನಡೆಸಿದ್ದರು. ಈ ಪ್ರಯತ್ನ ಫಲವನ್ನೂ ಕೊಟ್ಟಿತು. ಅಂದರೆ, ಈ ಬಾರಿ ಪರೀಕ್ಷೆಗೆ ಹಾಜರಾದ ದಿವ್ಯಾ 58 ನೇ ರ್ಯಾಂಕ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೇರ್ಪಟ್ಟಿದ್ದ ಸಲಿಂಗಿ ದಂಪತಿಯನ್ನು ಒಂದುಗೂಡಿಸಿದ ಕೇರಳ ಹೈಕೋರ್ಟ್
ದಿವ್ಯಾ ಶಾಲಾ ದಿನಗಳಿಂದಲೂ ಪ್ರತಿಭಾನ್ವಿತ ವಿದ್ಯಾರ್ಥಿನಿ. ಮುಜಾಫರ್ ನಗರದಲ್ಲಿ ಪ್ರೌಢಶಾಲೆಯನ್ನು ಮುಗಿಸಿ ಡಿಪಿಎಸ್ ಬೊಕಾರೋದಲ್ಲಿ ಇಂಟರ್ ಮೀಡಿಯೆಟ್ ಪಡೆದರು. ನಂತರ ಬಿಐಟಿಎಸ್ ಪಿಲಾನಿಯಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದು ಅದೇ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ.