
ಪಾಟ್ನಾ: ಬಿಹಾರದ ರೋಹ್ತಾಸ್ ಜಿಲ್ಲೆಯಲ್ಲಿ ದಿನಗೂಲಿ ಕಾರ್ಮಿಕರೊಬ್ಬರು ಆದಾಯ ತೆರಿಗೆ ಇಲಾಖೆಯಿಂದ 14 ಕೋಟಿ ರೂಪಾಯಿ ರಿಟರ್ನ್ಸ್ ಪಾವತಿಸುವಂತೆ ನೋಟಿಸ್ ಸ್ವೀಕರಿಸಿದ ನಂತರ ಆಘಾತಕ್ಕೊಳಗಾಗಿದ್ದಾರೆ.
ಕಾರ್ಘರ್ ಪೊಲೀಸ್ ಠಾಣೆ ವ್ಯಾಪ್ತಿಯ ಮನೋಜ್ ಯಾದವ್ ಎಂಬುವರೇ ದಿನಕ್ಕೆ 400 ರೂ. ನೋಟಿಸ್ ಬಂದ ನಂತರ, ಅವರ ಕುಟುಂಬ ಮತ್ತು ನೆರೆಹೊರೆಯವರು ಕೂಡ ಆಘಾತಕ್ಕೊಳಗಾಗಿದ್ದಾರೆ.
ಸೋಮವಾರ ಆದಾಯ ತೆರಿಗೆ ಇಲಾಖೆಯ ತಂಡವೊಂದು ಮನೋಜ್ ಮನೆಗೆ ಆಗಮಿಸಿ ನೋಟಿಸ್ ನೀಡಿದ ಬಳಿಕ ಈ ಸುದ್ದಿ ಬೆಳಕಿಗೆ ಬಂದಿದ್ದು, ಅವರ ಹೆಸರಿನಲ್ಲಿ ಕಂಪನಿಗಳು ನಡೆಯುತ್ತಿದ್ದು, ಸುಮಾರು 14 ಕೋಟಿ ರೂಪಾಯಿ ರಿಟರ್ನ್ಸ್ ಬಾಕಿ ಇದೆ ಎಂದು ಹೇಳಲಾಗಿದೆ.
ಅವರ ಬ್ಯಾಂಕ್ ದಾಖಲೆಗಳಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆದಿರುವುದು ಆದಾಯ ತೆರಿಗೆ ಪಾವತಿಗೆ ಹೊಣೆಗಾರರನ್ನಾಗಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ತಾನು ದಿನಗೂಲಿ ಕಾರ್ಮಿಕನಾಗಿದ್ದು, ತನ್ನ ಸಂಪೂರ್ಣ ಆಸ್ತಿ ಮಾರಾಟ ಮಾಡಿದರೂ 14 ಕೋಟಿ ರೂಪಾಯಿ ಪಾವತಿಸಲು ಸಾಧ್ಯವಿಲ್ಲ ಎಂದು ಯಾದವ್ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಯಾದವ್ ಅವರು ದೆಹಲಿ, ಹರಿಯಾಣ ಮತ್ತು ಪಂಜಾಬ್‌ನಲ್ಲಿ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ ಆದರೆ 2020 ರ ಕೋವಿಡ್ ಲಾಕ್‌ಡೌನ್ ನಂತರ ಬಿಹಾರದ ತಮ್ಮ ಮನೆಗೆ ಮರಳಿದ್ದರು.
ತಮ್ಮ ಹಿಂದಿನ ಕಂಪನಿಗಳು ತಮ್ಮ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ಆದಾಯ ತೆರಿಗೆಯಿಂದ ತಪ್ಪಿಸಿಕೊಳ್ಳಲು ವಹಿವಾಟು ನಡೆಸಲು ತಮ್ಮ ದಾಖಲೆಗಳನ್ನು ದುರುಪಯೋಗಪಡಿಸಿಕೊಂಡಿವೆ ಎಂದು ಯಾದವ್ ಆರೋಪಿಸಿದ್ದಾರೆ. ಉದ್ಯೋಗದ ಸಮಯದಲ್ಲಿ ಖಾಸಗಿ ಕಂಪನಿಗಳು ಅವರ ಆಧಾರ್ ಮತ್ತು ಪ್ಯಾನ್ ಕಾರ್ಡ್‌ಗಳ ಪ್ರತಿಗಳನ್ನು ತೆಗೆದುಕೊಂಡಿವೆ ಎಂದು ಅವರು ಹೇಳಿದ್ದಾರೆ.