alex Certify ಪೊಲೀಸ್ ಅಧಿಕಾರಿ – ವಿವಾಹಿತ ಮಹಿಳೆ ಕಳ್ಳಾಟ ಬಟಾಬಯಲು…! ಮುಂದಾಗಿದ್ದು ನಾಟಕೀಯ ಘಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸ್ ಅಧಿಕಾರಿ – ವಿವಾಹಿತ ಮಹಿಳೆ ಕಳ್ಳಾಟ ಬಟಾಬಯಲು…! ಮುಂದಾಗಿದ್ದು ನಾಟಕೀಯ ಘಟನೆ

ಈ ರೀತಿಯ ಘಟನೆ ನೀವು ಸಿನೆಮಾದಲ್ಲಿ ಮಾತ್ರ ನೋಡಿರ್ಲಿಕ್ಕೆ ಸಾಧ್ಯ. ವಾಸ್ತವದಲ್ಲಿ ಕಣ್ಮುಂದೆಯೇ ನಡೆದರೂ ನಂಬುವುದು ಕೊಂಚ ಕಷ್ಟ. ಅಷ್ಟಕ್ಕೂ ಈಗ ಏನಾಯ್ತು ಅಂದ್ರೆ, ಬಿಹಾರದ ಬೇಗುಸರಾಯ್ ಅನ್ನೊ ಪ್ರದೇಶದಲ್ಲಿ ಮದುವೆ ಸಮಾರಂಭ ನಡೆದಿದೆ. ಅಲ್ಲಿ, ಮಂಗಳವಾದ್ಯಗಳ ದನಿ ಇರಲಿಲ್ಲ, ಇಲ್ಲಾ ಪುರೋಹಿತರ ಮಂತ್ರ ಘೋಷ ಇರಲಿಲ್ಲ. ಇಲ್ಲಿ ಕೆಲವರು ಸೇರಿ ವ್ಯಕ್ತಿಯೊಬ್ಬನಿಂದ ಒತ್ತಾಯಪೂರ್ವಕವಾಗಿ ಮಹಿಳೆಯ ಹಣೆಗೆ ಸಿಂಧೂರ ಹಚ್ಚಿಸಿದ್ದರು. ಕೊನೆಗೆ ಇದನ್ನೇ ಮದುವೆ ಎಂದು ಅವರು ಘೋಷಿಸಿದ್ದರು.

ಅಸಲಿಗೆ ವಿವಾಹಿತ ಮಹಿಳೆಯೊಂದಿಗೆ ಅಬಕಾರಿ ಪೊಲೀಸ್ ಅಧಿಕಾರಿ ರೆಡ್ ಹ್ಯಾಂಡ್ ಆಗಿ ಮಹಿಳೆಯ ಕುಟುಂಬಸ್ಥರ ಕೈಗೆ ಸಿಕ್ಕಾಕಿಕೊಂಡಿದ್ಧಾರೆ. ಅವರೆಲ್ಲರೂ ಸೇರಿ ಗಲಾಟೆ ಮಾಡಿ, ಆಕೆಯ ಹಣೆಗೆ ಪೊಲೀಸ್ ಅಧಿಕಾರಿಯ ಕೈಯಿಂದ ಸಿಂಧೂರವನ್ನ ಇಡಿಸಿ, ಅವರಿಬ್ಬರ ವಿವಾಹವನ್ನ ಅಲ್ಲೇ ಮಾಡಿಸಿದ್ದಾರೆ. ಪೊಲೀಸ್ ಅಧಿಕಾರಿ ಮತ್ತು ಮಹಿಳೆ ಇಬ್ಬರೂ ವಿವಾಹಿತರಾಗಿದ್ದು, ಬಹಳ ದಿನಗಳಿಂದ ಇಬ್ಬರು ನಡುವೆ ಸಂಬಂಧ ಇತ್ತು ಎನ್ನಲಾಗಿದೆ

ಅಬಕಾರಿ ಇಲಾಖೆಯ ಎಎಸ್‌ಐ ಆಗಿರುವ ಸುಮಂತ್ ಕುಮಾರ್ ಶರ್ಮಾ ಅವರ ಕುಟುಂಬ ಗುವಾಹಟಿಯಲ್ಲಿ ವಾಸಿಸುತ್ತಿದೆ. ಇದರ ನಡುವೆ ಬೇಗುಸರಾಯ್‌ನ ಬನ್ಹರಾ ಗ್ರಾಮದ ಮಹಿಳೆಯನ್ನು ಸುಮಂತ್ ಬಲೆಗೆ ಬೀಳಿಸಿಕೊಂಡಿದ್ದರು. ಅಲ್ಲದೇ, ಸುಮಂತ್ ಮಹಿಳೆ ನಿರಂತರವಾಗಿ ಮನೆಗೆ ಭೇಟಿ ನೀಡುತ್ತಿದ್ದರು. ಇತ್ತೀಚೆಗೆ ಮನೆಗೆ ಬಂದಾಗಲೂ ಸುಮಂತ್ ಮಹಿಳೆಯೊಂದಿಗೆ ಇದ್ದರು. ಈ ವಿಷಯ ತಿಳಿದ ಮಹಿಳೆಯ ಕುಟುಂಬಸ್ಥರು ಸ್ಥಳಕ್ಕಾಗಮಿಸಿ ಇಬ್ಬರನ್ನೂ ಹಿಡಿದಿದ್ದಾರೆ

ಆಗ ಕುಟುಂಬಸ್ಥರು ಗಲಾಟೆ ಮಾಡಿದ್ದಾರೆ. ಅಲ್ಲದೇ, ಮಹಿಳೆಯು ತನ್ನನ್ನು ಮದುವೆಯಾಗುವಂತೆ ಸುಮಂತ್ ಕುಮಾರ್ ಶರ್ಮಾ ಮುಂದೆ ಬೇಡಿಕೆ ಇಟ್ಟಿದ್ದಾಳೆ. ಇದರಿಂದ ದಿಕ್ಕು ತೋಚದೇ ಕೊನೆಗೂ ಮಹಿಳೆಯ ಹಣೆಗೆ ಎಎಸ್‌ಐ ಸುಮಂತ್ ಕುಮಾರ್ ಶರ್ಮಾ ಸಿಂಧೂರ ಹಚ್ಚುವ ಮೂಲಕ ಮದುವೆಯಾಗಿದ್ದಾರೆ. ಇದರ ದೃಶ್ಯಗಳು ಮೊಬೈಲ್ನಲ್ಲೂ ಸೆರೆ ಹಿಡಿದಿದ್ದು, ಸದ್ಯ ಎಎಸ್‌ಐ ಮದುವೆ ವಿಡಿಯೋ ವೈರಲ್ ಆಗಿದೆ

ಇತ್ತ, ಈ ಮಹಿಳೆಗೂ ಈ ಹಿಂದೆಯೇ ಮದುವೆಯಾಗಿತ್ತು. ಆದರೆ, ಮೊದಲ ಗಂಡ ಮೇಸ್ತ್ರಿಯಾಗಿದ್ದು, ಆತನ ಆದಾಯವೂ ಕಡಿಮೆಯಾಗಿದ್ದ ಕಾರಣ ಆತನೊಂದಿಗೆ ಜೀವಿಸಲು ಮಹಿಳೆಗೆ ಇಷ್ಟವಿರಲಿಲ್ಲ. ಅಷ್ಟರಲ್ಲಿ ಎಎಸ್‌ಐ ಸುಮಂತ್ ಕುಮಾರ್ ಶರ್ಮಾ ಪರಿಚಯವಾಗಿ, ಆತನೊಂದಿಗೆ ಪ್ರೇಮಾಂಕುರ ಉಂಟಾಗಿತ್ತು ಎಂದು ತಿಳಿದು ಬಂದಿದೆ

ಇಡೀ ಘಟನೆ ಸಂಬಂಧ ಎಎಸ್‌ಐ ಸುಮಂತ್ ಕುಮಾರ್ ಶರ್ಮಾಗೆ ಇಲಾಖೆಯಿಂದ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಸುಮಂತ್ ಶರ್ಮಾ ಎಂಟು ತಿಂಗಳಿಂದ ಅಬಕಾರಿ ಇಲಾಖೆಯಲ್ಲಿ ಡೆಪ್ಯುಟೇಶನ್ ಮೇಲೆ ಕೆಲಸ ಮಾಡುತ್ತಿದ್ದಾರೆ ಎಂದು ಬೇಗುಸರಾಯ್ ಅಬಕಾರಿ ಇಲಾಖೆಯ ಅಧೀಕ್ಷಕ ಅವಿನಾಶ್ ಪ್ರಕಾಶ್ ತಿಳಿಸಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...