
ಪಾಟ್ನಾ: ಇಂದು ಮುಂಜಾನೆ ಬಿಹಾರದ ಬೇಗುಸರೈನಲ್ಲಿ ಬಸ್ ಡಂಪರ್ ಗೆ ಡಿಕ್ಕಿ ಹೊಡೆದು ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ.
ಬುಧವಾರ ಬೆಳಗಿನ ಜಾವ ಬಿಹಾರದ ಬೇಗುಸರೈನಲ್ಲಿ ಘಟನೆ ನಡೆದಿದೆ. ವೇಗವಾಗಿದ್ದ ಬಸ್ ನಿಯಂತ್ರಣ ತಪ್ಪಿ ಡಂಪರ್‌ಗೆ ಡಿಕ್ಕಿ ಹೊಡೆದು ಕನಿಷ್ಠ ನಾಲ್ವರು ಸಾವನ್ನಪ್ಪಿದ ದುರದೃಷ್ಟಕರ ಘಟನೆ ನಡೆದಿದೆ. ಅಪಘಾತದ ನಂತರ, ಸ್ಥಳೀಯರು ರಕ್ಷಣೆಗೆ ಧಾವಿಸಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಿಂದ ವಾಹನ ಸಂಚಾರ ಕೆಲಕಾ ಅಸ್ತವ್ಯಸ್ತಗೊಂಡಿತ್ತು. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.