ಮದುವೆಯಾದ ಐದೇ ದಿನಕ್ಕೆ ನವವಧು ಪ್ರಿಯಕರನಾದ ಚಿಕ್ಕಮ್ಮನ ಮಗನೊಂದಿಗೆ ಪರಾರಿಯಾದ ಘಟನೆ ಬಿಹಾರದಲ್ಲಿ ನಡೆದಿದೆ. ಇದರಿಂದ ಕಂಗಾಲಾದ ಪತಿ ಪೊಲೀಸರಿಗೆ ದೂರು ನೀಡಿದ್ದು, ಪತ್ನಿಯನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದಾನೆ.
ಚಿಕ್ಕಮ್ಮನ ಮಗನನ್ನು ಪ್ರೀತಿಸುತ್ತಿದ್ದ ಯುವತಿ ನಿಶ್ಚಿತಾರ್ಥವಾದ ಎರಡೇ ದಿನದಲ್ಲಿ ಆತನೊಂದಿಗೆ ಓಡಿಹೋಗಿದ್ದಳು. ಮನೆಯವರು ಅವರ ಮನವೊಲಿಸಿ ಕರೆದುಕೊಂಡು ಬಂದು ನಿಶ್ಚಿತಾರ್ಥವಾಗಿದ್ದ ಯುವಕನೊಂದಿಗೆ ಮದುವೆ ಮಾಡಿದ್ದರು. ಆದರೆ ಯುವತಿ ಮದುವೆಯಾದ 5 ದಿನಕ್ಕೆ ಮತ್ತೆ ಚಿಕ್ಕಮ್ಮನ ಮಗನೊಂದಿಗೆ ಓಡಿ ಹೋಗಿದ್ದಾಳೆ.
ಬಿಹಾರದ ಗೋಪಾಲ್ ಗಂಜ್ ಜಿಲ್ಲೆಯ ಮಂಝಗಢ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ದೀರ್ಘಕಾಲದಿಂದ ಚಿಕ್ಕಮ್ಮನ ಮಗನನ್ನು ಪ್ರೀತಿಸುತ್ತಿದ್ದ ಯುವತಿಗೆ ಮನೆಯವರು ಬೇರೆ ಮದುವೆ ಮಾಡಲು ನಿರ್ಧರಿಸಿದ್ದಾರೆ. ಆದರೆ, ಆಕೆ ಚಿಕ್ಕಮ್ಮನ ಮಗನೊಂದಿಗೆ ಪರಾರಿಯಾಗಿದ್ದು ಕುಟುಂಬದವರು ಮನವೊಲಿಸಿ ಕರೆದುಕೊಂಡು ಬಂದು ಮದುವೆ ಮಾಡಿದ್ದಾರೆ. ಇದಾದ 5 ದಿನಕ್ಕೆ ಮತ್ತೆ ಓಡಿ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.