ಹಾಸ್ಟೆಲ್ನಲ್ಲಿ ಮಲಗಿದ್ದ ವೇಳೆ ಹಾಸಿಗೆಯಲ್ಲೇ ಮೂತ್ರ ವಿಸರ್ಜನೆ ಮಾಡಿದ್ದಾನೆ ಎಂಬ ಕಾರಣಕ್ಕೆ 8 ವರ್ಷದ ಬಾಲಕನಿಗೆ ಶಾಲೆಯ ಪ್ರಿನ್ಸಿಪಾಲ್ ಮನಬಂದಂತೆ ಥಳಿಸಿದ ಘಟನೆಯು ಬಿಹಾರದಲ್ಲಿ ನಡೆದಿದೆ. ಕೂಡಲೇ ಶಾಲೆಗೆ ಆಗಮಿಸಿದ ಪೋಷಕರು ಗಲಾಟೆಯನ್ನೇ ಮಾಡಿದ್ದಾರೆ. ಆದರೆ ಈ ಎಲ್ಲಾ ಆರೋಪಗಳು ಸುಳ್ಳು ಎಂದು ಪ್ರಿನ್ಸಿಪಾಲ್ ಹೇಳಿದ್ದಾರೆ.
ಶೇಖ್ಪುರ ಜಿಲ್ಲೆಯ ಚೆವಾರಾ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾದ ಬಾಲಕ ಸಿಕಂದ್ರಾದ ಲಾರ್ಡ್ ಜೀಸಸ್ ಶಾಲೆಯ ಹಾಸ್ಟೆಲ್ನಲ್ಲಿ ವಾಸವಿದ್ದ. ಈತ ಮಲಗಿದ್ದ ವೇಳೆ ಹಾಸಿಗೆಯ ಮೇಲೆಯೇ ಮೂತ್ರ ಮಾಡಿಕೊಂಡಿದ್ದಾನೆ. ಇದರಿಂದ ಕೋಪಗೊಂಡ ಪ್ರಿನ್ಸಿಪಾಲ್ ಕೋಲಿನಿಂದ ಬಾಲಕನಿಗೆ ಚೆನ್ನಾಗಿ ಥಳಿಸಿದ್ದಾರೆ.
ವಾಟ್ಸಾಪ್, ಫೇಸ್ಬುಕ್ ಕ್ರ್ಯಾಶ್: ಶ್ರೀಮಂತನಿಗೆ ಶಾಕ್ – ಗಂಟೆಯಲ್ಲೇ ಕರಗಿತು ಜುಕರ್ ಬರ್ಗ್ 7 ಬಿಲಿಯನ್ ಸಂಪತ್ತು
ಆದರೆ ಈ ಆರೋಪವನ್ನು ನಿರಾಕರಿಸಿರುವ ಪ್ರಾಂಶುಪಾಲ ಪಂಕಜ್ ಕುಮಾರ್, ನಾನು ಘಟನೆ ನಡೆದ ದಿನ ಶಾಲೆಗೆ ಬಂದೇ ಇರಲಿಲ್ಲ. ನಾನು ಆ ಬಾಲಕನನ್ನು ಮುಟ್ಟಿಯೂ ಇಲ್ಲ ಎಂದು ಹೇಳಿದ್ದಾರೆ.
ಬಾಲಕನ ಸೋದರ ಸಂಬಂಧಿಗಳು ಭಾನುವಾರ ಬಾಲಕನನ್ನು ಭೇಟಿಯಾಗಿದ್ದರು. ಈ ವೇಳೆ ಬಾಲಕ ತನ್ನ ಮೇಲಾದ ಹಲ್ಲೆಯ ಬಗ್ಗೆ ವಿವರಿಸಿದ್ದಾನೆ. ಕೂಡಲೇ ಪೋಷಕರಿಗೆ ಮಾಹಿತಿ ರವಾನೆಯಾಗಿದೆ. ಸೋಮವಾರ ಶಾಲೆಗೆ ಆಗಮಿಸಿದ ಪೋಷಕರು ಪ್ರಾಂಶುಪಾಲರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.