alex Certify ಅತಿದೊಡ್ಡ ಟ್ರೇಡಿಂಗ್‌ ಮಿಸ್ಟೇಕ್‌ – ಬ್ರೋಕರ್‌ ಕಳೆದುಕೊಂಡದ್ದು ಬರೋಬ್ಬರಿ 250 ಕೋಟಿ ರೂಪಾಯಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತಿದೊಡ್ಡ ಟ್ರೇಡಿಂಗ್‌ ಮಿಸ್ಟೇಕ್‌ – ಬ್ರೋಕರ್‌ ಕಳೆದುಕೊಂಡದ್ದು ಬರೋಬ್ಬರಿ 250 ಕೋಟಿ ರೂಪಾಯಿ…..!

ಮುಂಬೈ: ದೇಶದ ಷೇರುಪೇಟೆಯ ನ್ಯಾಷನಲ್‌ ಸ್ಟಾಕ್‌ ಎಕ್ಸ್‌ಚೇಂಜ್‌ (ಎನ್‌ಎಸ್‌ಇ)ನಲ್ಲಿ ಕಳೆದ ವಾರ ಅತಿದೊಡ್ಡ ಟ್ರೇಡಿಂಗ್‌ ಮಿಸ್ಟೇಕ್‌ ಆಗಿದ್ದು, ಬ್ರೋಕರ್‌ ಬರೋಬ್ಬರಿ 250 ಕೋಟಿ ರೂಪಾಯಿ ಕಳೆದುಕೊಂಡಿರುವುದಾಗಿ ವರದಿಯಾಗಿದೆ. ಈ ಮಿಸ್ಟೇಕ್‌ ಅನ್ನು ಮಿಸ್‌ಕ್ಲಿಕ್‌ ಅಥವಾ ಫ್ಯಾಟ್‌ ಫಿಂಗರ್‌ ಎನ್ನುತ್ತಾರೆ.

ಕಳೆದ ಗುರುವಾರ, ನಿಫ್ಟಿ ಆಪ್ಶನ್ಸ್‌ ವಾರದ ಮುಕ್ತಾಯ ದಿನವಾದ ಕಾರಣ ಅಪರಾಹ್ನ 2:37 ಮತ್ತು 2:39 ರ ನಡುವೆ, ಬ್ರೋಕರ್‌ ಒಬ್ಬರು 25,000 ಲಾಟ್‌ಗಳ ನಿಫ್ಟಿ ಕಾಲ್‌ ಆಪ್ಶನ್ಸ್‌ ಅನ್ನು 14,500 ಸ್ಟ್ರೈಕ್‌ನಲ್ಲಿ 0.15 ರೂಪಾಯಿಗೂ ಕಮ್ಮಿ ಬೆಲೆಗೆ ಮಾರಾಟ ಮಾಡಿದ್ದಾರೆ. ಆಗ ಈ ಲಾಟ್‌ಗಳ ಮಾರುಕಟ್ಟೆ ಬೆಲೆ ಸುಮಾರು 2,100 ರೂಪಾಯಿ ಇತ್ತು. ಈ ವ್ಯಾಪಾರ ನಡೆಯುವಾಗ ನಿಫ್ಟಿ ಸೂಚ್ಯಂಕ 16,600 ಮಟ್ಟದಲ್ಲಿತ್ತು.

ಗರ್ಲ್‌ ಫ್ರೆಂಡ್‌ ಮೇಲಿನ ಕೋಪಕ್ಕೆ 40 ಕೋಟಿ ರೂ. ಮೌಲ್ಯದ ಕಲಾಕೃತಿ ಧ್ವಂಸ

ಪ್ರತಿ ನಿಫ್ಟಿ ಕಾಂಟ್ರಾಕ್ಟ್‌ನಲ್ಲಿ 50 ಸಂಖ್ಯೆಗಳಿದ್ದು, ಈ ವಹಿವಾಟಿನಲ್ಲಿ ಬ್ರೋಕರ್‌ಗೆ ಆಗಿರುವ ಅಂದಾಜು ಒಟ್ಟು ನಷ್ಟವು 250 ಕೋಟಿ ರೂಪಾಯಿ. ಯಾವ ಬ್ರೋಕಿಂಗ್ ಹೌಸ್‌ಗೆ ಈ ನಷ್ಟ ಆಗಿದೆ ಎಂಬುದು ಇನ್ನೂ ಬಹಿರಂಗವಾಗಿಲ್ಲ. ಇದುವರೆಗೆ ಈ ರೀತಿಯ ಮಿಸ್ಟೇಕ್‌ ಭಾರತೀಯ ಷೇರುಪೇಟೆಯಲ್ಲಿ ಆಗಿರಲಿಲ್ಲ ಎಂದು ವರದಿ ಹೇಳಿದೆ.

ಈ ಹಿಂದೆ 2012ರಲ್ಲಿ ಎನ್‌ಎಸ್‌ಇಯಲ್ಲಿ 60 ಕೋಟಿ ರೂಪಾಯಿ ಫ್ಯಾಟ್‌ಫಿಂಗರ್‌ಗೆ ಒಳಗಾಗಿ ನಷ್ಟವಾಗಿತ್ತು. ಇಂತಹ ತಪ್ಪಾಗದಂತೆ ತಡೆಯಲು ಬ್ರೋಕಿಂಗ್‌ ಹೌಸ್‌ಗಳು ಆಂತರಿಕವಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿವೆ. ಆದಾಗ್ಯೂ, ದೊಡ್ಡ ಪ್ರಮಾಣದಲ್ಲಿ ನಷ್ಟ ಉಂಟುಮಾಡುವ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕಡೆಗೆ ಎನ್‌ಎಸ್‌ಇ ಗಮನಹರಿಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...