ನವದೆಹಲಿ : ಲೋಕಸಭೆಯಲ್ಲಿ ಭಾರೀ ಗದ್ದಲ, ಕೋಲಾಹಲ ಮಾಡಿದ ಹಿನ್ನೆಲೆ ಇದೀಗ ಮತ್ತೆ 9 ಮಂದಿ ಸಂಸದರು ಅಮಾನತಾಗಿದ್ದು,ಇದುವರೆಗೆ 14 ಸಂಸದರು ಅಮಾನತಾಗಿದ್ದಾರೆ.
ಐವರು ಕಾಂಗ್ರೆಸ್ ಸಂಸದರನ್ನು ಅಮಾನತುಗೊಳಿಸಿದ ನಂತರ, ಸಂಸತ್ತಿನ ಕೆಳಮನೆ ಒಂಬತ್ತು ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸಿದೆ. ಅಮಾನತುಗೊಂಡ ಸಂಸದರಲ್ಲಿ ಬೆನ್ನಿ ಬೆಹನನ್, ವಿ.ಕೆ.ಶ್ರೀಕಂಠನ್, ಮೊಹಮ್ಮದ್ ಜಾವೇದ್, ಪಿ.ಆರ್.ನಟರಾಜನ್, ಕನಿಮೋಳಿ ಕರುಣಾನಿಧಿ, ಕೆ.ಸುಬ್ರಮಣ್ಯಂ, ಎಸ್.ಆರ್.ಪಾರ್ಥಿಬನ್, ಎಸ್.ವೆಂಕಟೇಶನ್ ಮತ್ತು ಮಾಣಿಕಂ ಠಾಗೋರ್, ಕಾಂಗ್ರೆಸ್ ಸಂಸದರಾದ ಟಿ.ಎನ್.ಪ್ರತಾಪನ್, ಡೀನ್ ಕುರಿಯಕೋಸ್, ಎಸ್.ಜೋತಿಮಣಿ, ರಮ್ಯಾ ಹರಿದಾಸ್ ಮತ್ತು ಹಿಬಿ ಈಡನ್ ಸೇರಿದ್ದಾರೆ. ಇದುವರೆಗೆ 14 ಸಂಸದರು ಅಮಾನತಾಗಿದ್ದಾರೆ.
ಭದ್ರತಾ ಉಲ್ಲಂಘನೆ ವಿವಾದದ ಮಧ್ಯೆ ‘ಅನ್ರುಲಿ ನಡವಳಿಕೆ’ಗಾಗಿ ಚಳಿಗಾಲದ ಅಧಿವೇಶನ ಮುಗಿಯುವವರೆಗೂ 14 ಲೋಕಸಭಾ ಸಂಸದರನ್ನು ಅಮಾನತು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.