ನವದೆಹಲಿ :ಎರಡು ವರ್ಷಗಳಿಂದ ಬಳಸದ ಬಳಕೆದಾರರಿಗೆ ಗೂಗಲ್ ಬಿಗ್ ಶಾಕ್ ನೀಡಿದ್ದು, ಡಿಸೆಂಬರ್ ನಲ್ಲಿ ಜಿಮೇಲ್ ಖಾತೆಗಳನ್ನು ಡಿಲೀಟ್ ಮಾಡುವುದಾಗಿ ಗೂಗಲ್ ಘೋಷಿಸಿದೆ.
ಹೌದು, ಗೂಗಲ್ ಕಂಪನಿಯು ತನ್ನ ಸುರಕ್ಷತಾ ನಿಯಮಗಳನ್ನು ಕಳೆದ ಮೇ ತಿಂಗಳಿನಲ್ಲಿ ಅಪ್ ಡೇಟ್ ಮಾಡಿದೆ. ಭದ್ರತಾ ಕ್ರಮವಾಗಿ ಡಿಸೆಂಬರ್ 2023 ರಲ್ಲಿ ಈ ಡಿಲೀಟ್ ಪ್ರಕ್ರಿಯೆ ಪ್ರಾರಂಭವಾಗುತ್ತದೆ.
ಮುಂದಿನ ಡಿಸೆಂಬರ್ ನಲ್ಲಿ ಕಳೆದ 2 ವರ್ಷದಿಂದ ಒಮ್ಮೆಯೂ ಲಾಗಿನ್ ಮಾಡದ ಗೂಗಲ್ ಖಾತೆಗಳನ್ನು ಡಿಲೀಟ್ ಮಾಡಲು ಆರಂಭಿಸುತ್ತೇವೆ, ಕನಿಷ್ಟ 2 ವರ್ಷಗಳಿಂದ ಬಳಕೆ ಮಾಡದ ಖಾತೆಗಳನ್ನು ನಿರಂತರವಾಗಿ ರದ್ದುಪಡಿಸುತ್ತೇವೆ , ಇದು ಸದ್ಯದಲ್ಲೇ ಜಾರಿಗೆ ಬರಲಿದೆ ಎಂದು ಉಪಾಧ್ಯಕ್ಷೆ ರೂತ್ ಕ್ರಿಚೇಲಿ ಹೇಳಿದ್ದಾರೆ.
ಈ ನಿಯಮದ ಪ್ರಕಾರ ವೈಯಕ್ತಿಕ ಗೂಗಲ್ ಖಾತೆಗಳು( ಜಿಮೇಲ್, ಡ್ರೈವ್, ಮೀಟ್ , ಕ್ಯಾಲೆಂಡರ್, ಗೂಗಲ್ ಫೋಟೋಸ್ ) ಮಾತ್ರ ರಿಲೀಡ್ ಆಗಲಿದೆ. ಕಂಪನಿಗಳು ಅಥವಾ ಶಾಲೆ ಇತ್ಯಾದಿ ಸಂಸ್ಥೆಗಳು ಹೊಂದಿರುವ ಗೂಗಲ್ ಖಾತೆ ಡಿಲೀಟ್ ಆಗಲ್ಲ ಎಂದು ಅವರು ಹೇಳಿದ್ದಾರೆ,