ಬೆಂಗಳೂರು : ಬೆಂಗಳೂರಿನಲ್ಲಿ ಶಂಕಿತ ಉಗ್ರರ ಬಂಧನ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರಿಗೆ ಮತ್ತೊಂದು ಸ್ಪೋಟಕ ಮಾಹಿತಿ ಲಭ್ಯವಾಗಿದ್ದು, ಐವರು ಶಂಕಿತ ಉಗ್ರರ ಬಳಿ ಸಿಕ್ಕಿರುವುದು ವಾಕಿಟಾಕಿಗಳಲ್ಲ, ಬದಲಿಗೆ ಅವು ಸುಧಾರಿತ ಸ್ಪೋಟಕಗಳನ್ನು ಸ್ಪೋಟಿಸಲು ಅನುಕೂಲವಾಗುವಂತೆ ಮಾರ್ಪಾಡುಗೊಳಿಸಿದ ಡಿವೈಸ್ ಗಳು ಎಂಬ ಅನುಮಾನ ಮೂಡಿಸಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರಿಗೆ ಆರೋಪಿಗಳ ಮನೆಯಲ್ಲಿ ವಾಕಿಟಾಕಿಗಳು ಪತ್ತೆಯಾಗಿದ್ದವು ಇವುಗಳನ್ನು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಇವು ವಾಕಿಟಾಕಿಗಳಲ್ಲ. ಬದಲಾಗಿ ಬಾಂಬ್ ಸ್ಪೋಟಕ್ಕೆ ಅನುಕೂಲವಾಗುವಂತೆ ಮಾರ್ಪಾಡು ಮಾಡಿದ ಡಿವೈಸ್ ಗಳು ಎಂದು ತಿಳಿದುಬಂದಿದೆ.
ಶಂಕಿತ ಉಗ್ರರು ಪೂರ್ವಯೋಜಿತ ಸಂಚಿನಂತೆ ಜನಸಂದಣಿ ಪ್ರದೇಶಗಳಲ್ಲಿ ಬಾಂಬ್ ಇಟ್ಟು, ಆಸ್ಥಳದಲ್ಲೇ ವಾಕಿ ಟಾಕಿ ಇಟ್ಟು, ಮತ್ತೊಂದು ವಾಕಿಟಾಕಿಯಿಂದ ಸಂಪರ್ಕಿಸಿದಾಗ ಬಾಂಬ್ ಸಿಡಿಸುವ ಹೊಸ ತಂತ್ರ ರೂಪಿಸಿದ್ದರು ಎನ್ನಲಾಗುತ್ತಿದೆ.