
ಬೆಂಗಳೂರು : ರಾಜ್ಯ ಸರ್ಕಾರವು ಆಡಳಿತ ಯಂತ್ರಕ್ಕೆ ಸರ್ಜರಿ ಮಾಡಿದ್ದು, ಮತ್ತೆ 10 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಐಎಎಸ್ ಅಧಿಕಾರಿ ಮೊಹಮ್ಮದ್ ಮೊಹ್ಸಿನ್ ಅವರನ್ನು ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ, ಟಿ.ಹೆಚ್ ಎಂ ಕುಮಾರ್ ಅವರನ್ನು ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಎಂಡಿಯಾಗಿ, ಪಂಡ್ವೆ ರಾಹುಲ್ ತುಕಾರಾಮ್ ಅವರನ್ನು ರಾಯಚೂರು ಜಿ.ಪಂ ಸಿಇಒ, ಎಸ್.ಜೆ. ಸೋಮಶೇಖರ್ ಅವರನ್ನು ಚಿತ್ರದುರ್ಗ ಜಿಪಂ ಸಿಇಒ, ಎಸ್. ರಂಗಪ್ಪ ಅವರನ್ನು ಕಂದಾಯ ಇಲಾಖೆ ಪಿಂಚಣಿ ವಿಭಾಗದ ನಿರ್ದೇಶಕ, ಡಾ.ಎಸ್. ಆಕಾಶ್ ಅವರನ್ನು ಕಲಬುರಗಿ ಜಿಲ್ಲೆಯ ಸಾರ್ವಜನಿಕ ಸೂಚನೆಗಳು ವಿಭಾಗದ ಹೆಚ್ಚುವರಿ ಆಯುಕ್ತ, ಅನ್ಮೂಲ್ ಜೈನ್ ಅವರನ್ನು ನೋಂದಣಿ ಡಿಐಜಿ ಆಗಿ ನೇಮಿಸಲಾಗಿದೆ.
ಆರ್. ಸ್ನೇಹಲ್ ಅವರನ್ನು ಬಿಎಂಟಿಸಿ ನಿರ್ದೇಶಕಿ (ಐಟಿ), ಪ್ರಭುಲಿಂಗಕವಲಿಕಟ್ಟಿ ಅವರನ್ನು ಪಶುಸಂಗೋಪನಾ ಆಯುಕ್ತರು, ಜಿ. ಲಕ್ಷ್ಮೀಕಾಂತ್ ರೆಡ್ಡಿ ಅವರನ್ನು ನಗರ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮದ ಜಂಟಿ ವ್ಯವಸ್ಥಾಪಕ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ.

