alex Certify BIGG NEWS : ಪದವಿಪೂರ್ವ ಕಾಲೇಜುಗಳಿಗೆ `ಶಾಲಾ ಶಿಕ್ಷಣ ಇಲಾಖೆ’ ಎಂದು ಮರುನಾಮಕರಣ : ರಾಜ್ಯ ಸರ್ಕಾರ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIGG NEWS : ಪದವಿಪೂರ್ವ ಕಾಲೇಜುಗಳಿಗೆ `ಶಾಲಾ ಶಿಕ್ಷಣ ಇಲಾಖೆ’ ಎಂದು ಮರುನಾಮಕರಣ : ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ಪದವಿಪೂರ್ವ ಕಾಲೇಜುಗಳಿಗೆ `ಶಾಲಾ ಶಿಕ್ಷಣ ಇಲಾಖೆ’ ಎಂದು ಮರುನಾಮಕರಣ ಮಾಡುವಂತೆ ರಾಜ್ಯ ಸರ್ಕಾರವು ರಾಜ್ಯಪತ್ರ ಹೊರಡಿಸಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಡಿಯಲ್ಲಿ ಬರುವ ಪದವಿ ಪೂರ್ವ ಕಾಲೇಜುಗಳ ಹಂತದಲ್ಲಿ ಹಾಗೂ ಅವುಗಳ ಕಛೇರಿಗಳಲ್ಲಿನ ಪದನಾಮವನ್ನು ಬದಲಾಯಿಸುವ ಬಗ್ಗೆ ರಾಜ್ಯ ಸರ್ಕಾರವು ರಾಜ್ಯಪತ್ರ ಹೊರಡಿಸಿದೆ.

ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (Department of School Education and Literacy) ಎಂದು ಮರುಪದನಾಮಿಕರಣಗೊಳಿಸಿ ಆದೇಶಿಸಲಾಗಿರುತ್ತದೆ. (ಕರ್ನಾಟಕ ಸರ್ಕಾರದ ಕೆಲಸಗಳ ಹಂಚಿಕೆ) ನಿಯಮಗಳು 1977ರ ಅನುಸೂಚಿ – V ರಲ್ಲಿದ್ದ ಶಿಕ್ಷಣ ಇಲಾಖೆ ಎಂಬ ಶೀರ್ಷಿಕೆಗೆ “ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ” ಎಂಬ ಶೀರ್ಷಿಕೆ ನೀಡಿ ತಿದ್ದುಪಡಿ ಮಾಡಲಾಗಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಹಾಗೂ ಅದರ ಅಧೀನದಲ್ಲಿ ಬರುವ ಎಲ್ಲಾ ಕ್ಷೇತ್ರ ಕಛೇರಿಗಳು ಹಾಗೂ ರಾಜ್ಯದ ಎಲ್ಲಾ ಜಿಲ್ಲಾ, ಕ್ಲಸ್ಟರ್, ಶಾಲೆಗಳು ಮತ್ತು ಕಛೇರಿಗಳ ನಾಮಫಲಕಗಳನ್ನು ಮರು ಪದನಾಮೀಕರಣಗೊಳಿಸಿ ಆದೇಶಿಸಲಾಗಿರುತ್ತದೆ.

ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಹಾಗೂ ಪದವಿ ಪೂರ್ವ ಹಂತದ ಶಿಕ್ಷಣದ ಜಿಲ್ಲಾ ಉಪನಿರ್ದೇಶಕರುಗಳ ಕಛೇರಿ ಮತ್ತು ಎಲ್ಲಾ ಪದವಿ-ಪೂರ್ವ ಕಾಲೇಜುಗಳನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಎಂಬ ನೂತನ ಪದನಾಮಕ್ಕೆ ಸರಿಹೊಂದುವಂತೆ ಬದಲಾಯಿಸಲು ಸರ್ಕಾರವು ನಿರ್ಣಯಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಪುಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧೀನದಲ್ಲಿ ಬರುವ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಹಾಗೂ ಪದವಿ ಪೂರ್ವ ಹಂತದ ಶಿಕ್ಷಣದ ಜಿಲ್ಲಾ ಉಪನಿರ್ದೇಶಕರ ಕಛೇರಿ ಮತ್ತು ಎಲ್ಲಾ ಪದವಿ-ಪೂರ್ವ ಕಾಲೇಜುಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪದನಾಮೀಕರಣಗೊಳಿಸಿ, ಆದೇಶಿಸಿದೆ. ಕಳಕಂಡಂತೆ ಮರುನಾಮಕರಣ ಮಾಡಿದೆ.

1) ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಹಾಗೂ ಪದವಿ ಪೂರ್ವ ಹಂತದ ಶಿಕ್ಷಣದ ಜಿಲ್ಲಾ ಉಪನಿರ್ದೇಶಕರ ಕಛೇರಿಯನ್ನು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಎಂದು ಪದನಾಮೀಕರಿಸುವುದು.

2) ಎಲ್ಲಾ ಪದವಿ-ಪೂರ್ವ ಕಾಲೇಜುಗಳನ್ನು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ ಕಾಲೇಜು) ಎಂದು ಪದನಾಮೀಕರಿಸುವುದು.

3) ಈ ಮೇಲಿನಂತೆ ನೂತನವಾಗಿ ಪದನಾಮೀಕರಿಸಿದ ಪದನಾಮವನ್ನು ಸಂಬಂಧಿಸಿದ ಎಲ್ಲಾ ಕಛೇರಿ/ ಪದವಿ ಪೂರ್ವ ಕಾಲೇಜುಗಳ ನಾಮಫಲಕಗಳಲ್ಲಿ (ಬೋರ್ಡ್‌) ಬರಸಲು ಕ್ರಮಕೈಗೊಳ್ಳುಬೇಕು ಎಂದು ಸೂಚನೆ ನೀಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...