ಬೆಂಗಳೂರು : ಪಿಎಸ್ ಐ ಮರು ಪರೀಕ್ಷೆಗೆ ಹೈಕೋರ್ಟ್ ಆದೇಶ ಹೊರಿಸಿರುವ ಹಿನ್ನೆಲೆಯಲ್ಲಿ ಕೋರ್ಟ್ ಆದೇಶವನ್ನು ಪರಿಶೀಲಿಸಿ ಸೋಮವಾರ ಅಥವಾ ಮಂಗಳವಾರ ಸೂಕ್ತ ನಿರ್ಧಾರ ಪ್ರಕಟಿಸಲಾಗುವುದು ಎಂದು ಗೃಹಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕೋರ್ಟ್ ಆದೇಶವನ್ನು ನಾನು ಸಂಪೂರ್ಣವಾಗಿ ಓದಿಲ್ಲ. ಅಡ್ವೋಕೇಟ್ ಜನರಲ್ ಜೊತೆಗೆ ಮಾತನಾಡಿದ್ದೇನೆ. ಬೇಗ ಪರೀಕ್ಷೆ ನಡೆಸಲು ಸೂಚಿಸಲಾಗಿದೆ ಎಂದರು.
ನಿಯಮ -32 ರಡಿ 500 ರಿಂದ 600 ಎಎಸ್ ಐ ಗಳಿಗೆ ಪಿಎಸ್ ಐ ಹುದ್ದೆಗಳಿಗೆ ಬಡ್ತಿ ನೀಡಲಾಗಿದೆ. ಇನ್ನೂ 400 ಪಿಎಸ್ ಐ ಹುದ್ದೆ ಖಾಲಿ ಇವೆ. ಮರುಪರೀಕ್ಷೆ ನಡೆಸಬೇಕಿರುವ 545 ಹುದ್ದೆಗಳ ಜೊತೆಗೆ ಈ 400 ಹುದ್ದೆಗಳನ್ನೂ ಸೇರಿಸಿ ಪರೀಕ್ಷೆ ನಡೆಸುವ ಕುರಿತು ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.