ಬೆಂಗಳೂರು : ಸೈಬರ್ ಸುರಕ್ಷತೆಗಾಗಿ ಕರ್ನಾಟಕ ಸರ್ಕಾರವು ಟೆಕ್ ಸಂಸ್ಥೆ ಮೆಟಾದೊಂದಿಗೆ ಕೈಜೋಡಿಸಿದೆ. ಈ ಪಾಲುದಾರಿಕೆಯಿಂದ ಕರ್ನಾಟಕದಾದ್ಯಂತ 100 ಕಾಲೇಜು ಮತ್ತು ಯೂನಿವರ್ಸಿಟಿಗಳಲ್ಲಿ ಆನ್ಲೈನ್ ಸುರಕ್ಷತಾ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಡಿಜಿಟಲ್ ಸುರಕ್ಷತೆಗಾಗಿ 2025ರ ವೇಳೆಗೆ 1 ಲಕ್ಷ ಶಿಕ್ಷಕರು ಮತ್ತು 10 ಲಕ್ಷ ವಿದ್ಯಾರ್ಥಿಗಳಿಗೆ AR-VR ಕೌಶಲ್ಯಗಳ ತರಬೇತಿ ನೀಡಲಾಗುವುದು. ಸರ್ಕಾರದ ವಿವಿಧ ಇಲಾಖೆಗಳ ನಡುವೆ ಮಾಹಿತಿ ಸಂವಹನವನ್ನು ಸುಗಮಗೊಳಿಸಿ ವಾಟ್ಸಾಪ್ ಮೂಲಕ ಜನರಿಗೆ ಸುಲಭವಾಗಿ ಮಾಹಿತಿ ತಲುಪಿಸಲು ITBT/RDPR ಇಲಾಖೆಗಳ ಜಂಟಿ ಸಹಭಾಗಿತ್ವದಲ್ಲಿ ಚಾಟ್ ಬಾಟ್ ಅಭಿವೃದ್ಧಿಪಡಿಸುವುದು ಎಂದು ಹೇಳಿದ್ದಾರೆ.
ಆನ್ಲೈನ್ ಸುರಕ್ಷತೆ ಕುರಿತ ಮಾಹಿತಿಗಳು ಮತ್ತು ಜಾಗೃತಿ ಸಂದೇಶಗಳನ್ನು ಜನತೆಗೆ ತಲುಪಿಸಲು ಡಿಜಿಟಲ್ ಸುರಕ್ಷತಾ ಚಾಟ್ ಬಾಟ್ ಅಭಿವೃದ್ಧಿಪಡಿಸುವುದು. ಆರೋಗ್ಯ, ಶಿಕ್ಷಣ ಮತ್ತು ಗೇಮಿಂಗ್ ಕ್ಷೇತ್ರಗಳಿಗಾಗಿ ಕರ್ನಾಟಕ ಸರ್ಕಾರ ಮತ್ತು ಮೆಟಾದ AR/VRನ ಪಾಲುದಾರಿಕೆ ಸಾಧ್ಯವಾಗಲಿದೆ. ಅಲ್ಲದೇ ಮಾನ್ಯ ಮುಖ್ಯಮಂತ್ರಿಗಳು ಡೀಪ್ ಫೇಕ್ ಮತ್ತು ಸುಳ್ಳು ಮಾಹಿತಿಯ ಕುರಿತಾಗಿಯೂ ಮೆಟಾದ ಗ್ಲೋಬಲ್ ಪಬ್ಲಿಕ್ ಪಾಲಿಸಿಯ V.P Mr. Joel Kaplan ಅವರೊಂದಿಗೆ ಚರ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.