ಬೆಂಗಳೂರು : ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡು ಮೋಸ ಮಾಡಿದ್ದಾರೆ ಎಂದು ಬೆಂಗಳೂರು ಮೂಲದ ಯುವತಿಯ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಸಂಸದ ದೇವೇಂದ್ರಪ್ಪ ಪುತ್ರ ರಂಗನಾಥ್ ಯುವತಿ ವಿರುದ್ಧ ದೂರು ದಾಖಲಿಸಿದ್ದಾರೆ.
.ಸಂಸದ ದೇವೇಂದ್ರಪ್ಪ ಪುತ್ರ ರಂಗನಾಥ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸರಾಗಿ ಕಾರ್ಯನಿರ್ವಹಿಸುತ್ತಿದ್ದು, ಯುವತಿ ಹಣಕ್ಕಾಗಿ ನನಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ರಂಗನಾಥ್ ದೂರಿನಲ್ಲಿ ಉಲ್ಲೇಖಿಸಿರುವುದು ಏನು?
ರಂಗನಾಥ್ ಆದ ನಾನು ಪರಿಶಿಷ್ಟ ಪಂಗಡದ ನಾಯಕ ಜನಾಂಗಕ್ಕೆ ಸೇರಿದ್ದು, ನನ್ನ ಸ್ನೇಹಿತ ಕಲ್ಲೇಶ್‌ರವರಿಂದ ಯುವತಿ ಪರಿಚಯವಾಗಿದ್ದು, ಅವರು ನನ್ನನ್ನು 2-3 ಬಾರಿ ಭೇಟಿಯಾಗಿದ್ದು, ಆ ಸಮಯದಲಿ ನನ್ನನ್ನು ಪ್ರೀತಿಸುತ್ತಿರುವುದಾಗಿ ತಿಳಿಸಿರುತ್ತಾರೆ.
ಆಗ ನಾನು ಇದಕ್ಕೆ ವಿರೋಧ ವ್ಯಕ್ತ ಪಡಿಸರುತ್ತೇನೆ..ಹೀಗಿರುವಾಗ 2023 ಅಕ್ಟೋಬರ್ ತಿಂಗಳ ಮೊದಲನೆ ವಾರದ ಒಂದು ದಿನ ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ಮಧ್ಯಾಹ್ನ ಸುಮಾರು 2:30 ರಿಂದ ಸಂಜೆ 4 ಗಂಟೆ ವರೆಗೂ ನನ್ನನ್ನು ಭೇಟಿಯಾಗಿ ನನಗೆ ಅವಾಚ್ಯ ಶಬ್ದಗಳಿಂದ ಬೈದು, ತಾನು ವಿಶ್ವಕರ್ಮ ಜನಾಂಗದವಳಾಗಿಪರಿಶಿಷ್ಟ ಪಂಗಡದವನಾದ ನಿನ್ನನ್ನು ಮದುವೆ ಮಾಡಿಕೊಳ್ಳಲು ಕೇಳಿದರೆ ಆಗುವುದಿಲ್ಲ ಎಂದು ಹೇಳುತ್ತಿಯ? ನಿನಗೆ ಎಷ್ಟು ಅಹಂಕಾರ ಎಂದು ಅವಾಚ್ಯ ಶಬ್ದಗಳಿಂದ ಬೈದು, ಸನನ್ನ ಸ್ನೇಹಿತರ ಮತ್ತು ಸಾರ್ವಜನಿಕ ಮುಂದೆ ಜಾತಿನಿಂದನೆ ಮಾಡಿರುತ್ತಾರೆ.
ಈ ಮೊದಲು ಆ ಯುವತಿ . ನನ್ನ ಜೊತೆ ಇರುವ ಫೋಟೋಗಳನು ಮಾತುಕತೆಯ ಸಂಭಾಷಣೆಯನ್ನು ನನ್ನ ಪತ್ನಿಗೆ ಕಳುಹಿಸಿ ತೊಂದರೆ ಕೊಡುತ್ತೇನೆ ಎಂದು ಬೆದರಿಕೆ ಹಾಕಿ ಮಾನಸಿಕ ಹಿಂಸೆ ನೀಡಿರುತ್ತಾರೆ. ನಂತರ ಪದೇ ಪದೇ ನನಗೆ ಕರೆಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದು, ನಾನು ಆಕೆಯ ಬೆದರಿಕೆಗೆ ಹೆದರಿ ನನ್ನ ಖಾತೆಯಿಂದ ಸುಮಾರು 32,500 ರೂಪಾಯಿಯನ್ನ ಯುವತಿ ಖಾತೆಗೆವರ್ಗಾವಣೆ ಮಾಡಿರುತ್ತೇನೆ. ಇದಾದ ಮೇಲೆ ನಾನು ಈಕೆಯ ಕಿರುಕುಳಕ್ಕೆ ಬೇಸತ್ತು, ಹಣ ನೀಡಲು ಆಗುವುದಿಲ್ಲವೆಂದು ಹೇಳಿದಾಗ ಆ ಯುವತಿಯು ಶ್ರೀನಿವಾಸ್ ಎಂಬ ವ್ಯಕ್ತಿಯನ್ನು ಕಳುಹಿಸಿದ್ದು, 2023ರ ಅಕ್ಟೋಬರ್ 28 ರಂದು ಮೈಸೂರಿಗೆ ಶ್ರೀನಿವಾಸ್ ಬಂದು ಐಶ್ವರ್ಯ ಪೆಟ್ರೋಲ್ ಬಂಕ್ ಎದುರಿನ ಗ್ರೀನ್ ಫುಡ್ ಕೋರ್ಟ್ ಎಂಬ ಹೋಟೆಲ್‌ನಲ್ಲಿ ನನ್ನನ್ನು ಭೇಟಿ ಮಾಡಿದ್ದು, ಆ ಸಮಯದಲ್ಲಿ ನನ್ನ ಜೊತೆ ನನ್ನ ಸ್ನೇಹಿತ ಶ್ಯಾಮ್ ಎಂಬುವರು ಇದ್ದು, ಶ್ರೀನಿವಾಸ್ 15 ಲಕ್ಷ ಹಣಕ್ಕೆ, ಬೇಡಿಕೆ ಇಟ್ಟಿದ್ದರು. ನಾನು ಇದಕ್ಕೆ ನಿರಾಕರಿಸಿದಾಗ ಅವನು ನನಗೆ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.