ನವದೆಹಲಿ: ಭಾರತ ಮತ್ತು ಮಾಲ್ಡೀವ್ಸ್ ನಡುವೆ ಸಂಘರ್ಷ ಮುಂದುವರೆದಿರುವ ನಡುವೆಯೇ ಭಾರತ ಸರ್ಕಾರ ಮೇ 10 ರೊಳಗೆ ತನ್ನ ಎಲ್ಲಾ ಯೋಧರನ್ನು ಭಾರತಕ್ಕೆ ಕರೆಸಿಕೊಳ್ಳಲು ಒಪ್ಪಿರುವುದಾಗಿ ಮಾಲ್ಡೀವ್ಸ್ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಭಾರತವು ಕಾರ್ಯಾಚರಣೆ ಮತ್ತು ನಿರ್ವಹಣಾ ಕಾರ್ಯಗಳಲ್ಲಿ ತೊಡಗಿರುವ ತನ್ನ ಮಿಲಿಟರಿ ಸಿಬ್ಬಂದಿಯನ್ನು ಮೇ 10 ರೊಳಗೆ ಭಾರತಕ್ಕೆ ಕರೆಸಿಕೊಳ್ಳಲಿದೆ ಎಂದು ಶುಕ್ರವಾರ ಇಲ್ಲಿ ನಡೆದ ಎರಡನೇ ಭಾರತ-ಮಾಲ್ಡೀವ್ಸ್ ಉನ್ನತ ಮಟ್ಟದ ಕೋರ್ ಗ್ರೂಪ್ ಸಭೆಯ ಕುರಿತು ಮಾಲ್ಡಿವ್ಸ್ ಪೋಸ್ಟ್ ಮಾಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಸ್ತುತ ಮಾಲ್ಡೀವ್ಸ್ ನಲ್ಲಿ ಭಾರತದ 80ಯೋಧರು ಮೂರು ತಂಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮೊದಲ ತಂಡವನ್ನು ಮಾರ್ಚ್ 10 ರೊಳಗೆ ಹಿಂಪಡೆಯಾಗುವುದು, ಮತ್ತೆರಡು ತಂಡಗಳನ್ನು ಮೇ.10 ರೊಳಗೆ ಹಿಂದಕ್ಕೆ ಕರೆಸಿಕೊಳ್ಳಲು ಭಾರತ ಸರ್ಕಾರದ ಜೊತೆಗೆ ಒಪ್ಪಂದ ಏರ್ಪಟ್ಟಿದೆ ಎಂದು ಮಾಲ್ಡೀವ್ಸ್ ತಿಳಿಸಿದೆ.