alex Certify BIGG NEWS : ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ K-SET ಪರೀಕ್ಷೆ : ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIGG NEWS : ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ K-SET ಪರೀಕ್ಷೆ : ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ

ಬೆಂಗಳೂರು : ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (K-SET) ಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ದ ಮೂಲಕ ನಡೆಸುವ ಕುರಿತು ರಾಜ್ಯ ಸರ್ಕಾರವು ಅಧಿಕೃತ ಆದೇಶ ಹೊರಡಿಸಿದೆ.

ವಿಶ್ವವಿದ್ಯಾಲಯ ಧನಸಹಾಯ ಆಯೋಗವು ದಿನಾಂಕ:19.12.2019ರಂದು ನಡೆದ ಸಭೆಯಲ್ಲಿ ಮಾನ್ಯತೆ ಸಮಿತಿಯ ಶಿಫಾರಸ್ಸುಗಳ ಆಧಾರದ ಮೇಲೆ ಕರ್ನಾಟಕ ರಾಜ್ಯದ ಪರವಾಗಿ 03 K-SET ಪರೀಕ್ಷೆಗಳನ್ನು ನಡೆಸಲು ಮೈಸೂರು ವಿಶ್ವವಿದ್ಯಾಲಯಕ್ಕೆ ಮಾನ್ಯತೆಯನ್ನು ನೀಡಲು ನಿರ್ಧರಿಸಿ, 41 ವಿಷಯಗಳಲ್ಲಿ ದಿನಾಂಕ:14.01.2020ರಿಂದ 03 ವರ್ಷಗಳವರೆಗೆ (ಪ್ರತಿ ವರ್ಷ 01 ಬಾರಿಗೆ) ಕೆ-ಸೆಟ್ ಪರೀಕ್ಷೆಯನ್ನು ನಡೆಸಲು ಮಾನ್ಯತೆಯನ್ನು ನೀಡಿರುತ್ತದೆ.

2022ನೇ ಶೈಕ್ಷಣಿಕ ಸಾಲಿನಲ್ಲಿ ಆಯಾ ರಾಜ್ಯ ಸರ್ಕಾರಗಳು ಗುರುತಿಸಿರುವ ರಾಜ್ಯ ನೋಡಲ್ ಏಜೆನ್ಸಿಗಳಿಗೆ ಯುಜಿಸಿ ಯಿಂದ ಮಾನ್ಯತೆ ಅಗತ್ಯವಿರುವ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (K-SET) ಯನ್ನು ನಡೆಸಲು ಮೈಸೂರು ವಿಶ್ವವಿದ್ಯಾಲಯಕ್ಕೆ ಅನುಮತಿ ನೀಡಿರುತ್ತದೆ.

ಆದರೆ, ಮೈಸೂರು ವಿಶ್ವವಿದ್ಯಾಲಯದಲ್ಲಿ ಜುಲೈ-2021 ರಲ್ಲಿ ನಡೆದ ಕೆ-ಸೆಟ್ ಪರೀಕ್ಷೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಹಾಗೂ ಈ ಪ್ರಕ್ರಿಯೆಗೆ ಮೈಸೂರು ವಿಶ್ವವಿದ್ಯಾಲಯದ ಕೌಸಟ್ ಪರೀಕ್ಷೆಯ ಸಂಯೋಜಕರು ಹಾಗೂ ಇತರರು ಸಂಪೂರ್ಣ ಹೊಣೆಗಾರರೆಂದು ದೂರುಗಳು ಬಂದಿದ್ದು, ಇದರ ಬಗ್ಗೆ ಮೇಲೆ ಕ್ರಮ ಸಂಖ್ಯೆ: (4)ರ ಆದೇಶದಲ್ಲಿ ಪ್ರತ್ಯೇಕ ತನಿಖೆಗೆ ಸಮಿತಿ ರಚಿಸಿ ಆದೇಶಿಸಲಾಗಿದೆ.

ಈ ರೀತಿ ಅವ್ಯವಹಾರಗಳು ನಡೆದಲ್ಲಿ, ಅರ್ಹತೆಯಿರುವ/ಪ್ರತಿಭಾವಂತ ಸಾವಿರಾರು ಅಭ್ಯರ್ಥಿಗಳಿಗೆ ಅನ್ಯಾಯವಾಗುವುದರಿಂದ ಹಾಗೂ ಮುಂಬರುವ ಯುವ ಪೀಳಿಗೆಗೆ ಗುಣಮಟ್ಟದ ಶೈಕ್ಷಣಿಕ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗದೇ ಇರುವುದರಿಂದ, ಪರೀಕ್ಷೆಯಲ್ಲಿ ಪಾರದರ್ಶಕತೆಯನ್ನು ತರಲು ಕೆ-ಸೆಟ್ ಪರೀಕ್ಷೆಯನ್ನು ಸ್ವತಂತ್ರ ಸಂಸ್ಥೆ ನಡೆಸುವುದು ಸೂಕ್ತವಾಗಿರುತ್ತದೆಯೇ ಹೊರತು ಯಾವುದೇ ವಿಶ್ವವಿದ್ಯಾಲಯದಿಂದಲ್ಲ ಎಂಬುದನ್ನು ಮನಗಂಡು ಸರ್ಕಾರವು, ಮೈಸೂರು ವಿಶ್ವವಿದ್ಯಾಲಯವು 2021 ಜುಲೈ ನಲ್ಲಿ ನಡೆಸಿದ ಕೆ-ಸೆಟ್ ಪರೀಕ್ಷೆಯಲ್ಲಿ ನಡೆದ ಅವ್ಯವಹಾರಗಳ ಹಿನ್ನೆಲೆಯಲ್ಲಿ, 2022ನೇ ಸಾಲಿನ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (K-SET) ಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ದ ಮೂಲಕ ನಡೆಸಲು ತೀರ್ಮಾನಿಸಿ, ಅದರಂತೆ ಈ ಆದೇಶ ಹೊರಡಿಸಲಾಗಿದೆ.

ಯುಜಿಸಿ ಯಿಂದ ಮಾನ್ಯತೆ ಅಗತ್ಯವಿರುವ ರಾಜ್ಯ ಅರ್ಹತಾ ಪರೀಕ್ಷೆಯನ್ನು ನಡೆಸಲು ಯುಜಿಸಿಯ ಪರಿಕಲ್ಪನೆ ಮತ್ತು ವ್ಯಾಪ್ತಿಯಡಿ ರಾಜ್ಯ ಸರ್ಕಾರವು ಒಂದು ಏಜೆನ್ಸಿಯನ್ನು ಗುರುತಿಸಬಹುದು, ಅದು ವಿಶ್ವವಿದ್ಯಾನಿಲಯವಾಗಿರಬಹುದು ಅಥವಾ ವುತಿಷ್ಠಿತ ಪರೀಕ್ಷಾ ಸಂಸ್ಥೆ ಅಥವಾ ಉನ್ನತ ಶಿಕ್ಷಣಕ್ಕಾಗಿ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ಪ್ರತಿಷ್ಠಿತ ಸಂಸ್ಥೆಯಾಗಿರಬಹುದೆಂಬ ಅವಕಾಶದಡಿ 2022ನೇ ಸಾಲನ್ನು ಒಳಗೊಂಡಂತೆ ಮುಂದಿನ ಆದೇಶದವರೆಗೆ ಕೆ-ಸೆಟ್ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ದ ಮೂಲಕ ನಡೆಸುವಂತೆ ಆದೇಶಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...