ಬೆಂಗಳೂರು :ಸರ್ಕಾರಿ ನೌಕರರಿಗೆ ಮಂಜೂರು ಮಾಡುತ್ತಿರುವ ಹಬ್ಬದ ಮುಂಗಡ ಮೊತ್ತವನ್ನು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೂ ವಿಸ್ತರಿಸುವಂತೆ ಮನವಿ ಮಾಡಲಾಗಿದೆ.
ಹಬ್ಬದ ಮುಂಗಡ ಮೊತ್ತವನ್ನು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೂ ವಿಸ್ತರಿಸುವ ಸಂಬಂಧ ಪ್ರಸ್ತಾವನೆಯನ್ನು ಪರಿಶೀಲಿಸಲು ಈ ಕೆಳಕಂಡ ಮಾಹಿತಿಯನ್ನು ದಾಖಲೆಗಳೊಂದಿಗೆ ಒದಗಿಸುವಂತೆ ಕೋರಲಾಗಿದೆ.
ಕಾಲಕಾಲಕ್ಕೆ ಹಬ್ಬದ ಮುಂಗಡವನ್ನು ಪರಿಷ್ಕರಿಸಿರುವ ದರವನ್ನು ಅನ್ವಯಿಸಿ ಶಿಕ್ಷಣ ಇಲಾಖೆಯು ಸಹ ಅನುದಾನಿತ ಶಾಲೆಗಳ ಸಿಬ್ಬಂದಿಗೆ ಹಬ್ಬದ ಮುಂಗಡವನ್ನು ಕಾಲಕಾಲಕ್ಕೆ ಪರಿಷ್ಕರಿಸಿ ಹೊರಡಿಸಿರುವ ಆದೇಶಗಳ ಪ್ರತಿಗಳನ್ನು ಪರಿಶೀಲನೆಗಾಗಿ ಒದಗಿಸುವುದು.
ಪ್ರಸ್ತುತ ಅನುದಾನಿತ ಶಾಲೆಗಳ ಸಿಬ್ಬಂದಿಗೆ ಯಾವ ದರದಲ್ಲಿ ಹಬ್ಬದ ಮುಂಗಡವನ್ನು ನೀಡಲಾಗುತ್ತಿದೆ ಎಂಬುದನ್ನು ಕೇಳಲಾಗಿದೆ.