ರಾಮನಗರ : ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಕುರಿತಂತೆ ಸೆಪ್ಟೆಂಬರ್ 21 ರ ನಾಳೆಯೇ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುರುವಾರ ನಾನು ದೆಹಲಿಗೆ ತೆರಳುತ್ತಿದ್ದೇನೆ. ಸದ್ಯ ದೇವೇಗೌಡರು ದೆಹಲಿಯಲ್ಲಿಯೇ ಇದ್ದಾರೆ. ನಾಳೆ ಬಿಜೆಪಿ ವರಿಷ್ಠರೊಂದಿಗೆ ಮಾತುಕತೆ ನಡೆಸಲಿದ್ದು, ಮೈತ್ರಿ ಅಂತಿಮಗೊಳಿಸುತ್ತೇವೆ, ಸೀಟು ಹಂಚಿಕೆ ಕುರಿತು ಇದುವರೆಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್‌ನವರು ಬಿಜೆಪಿ ಮತ್ತು ಜೆಡಿಎಸ್‌ನಿಂದ ಎಷ್ಟು ಜನರನ್ನು ಕರೆಸಿಕೊಳ್ಳುತ್ತಾರೋ ನೋಡೋಣ, ಮುಂದೆ ಆ ಕಡೆಯಿಂದಲೂ ಈ ಕಡೆಗೆ ಬರುವ ಕಾಲ ಬರುತ್ತದೆ ಎಂದರು.
.