ಬೆಂಗಳೂರು : ವಿಶ್ವ ಆನೆ ದಿನದ ಹಿನ್ನೆಲೆಯಲ್ಲಿ ಆನೆಗಳ ಗಣತಿಯ ವರದಿ ಬಿಡುಗಡೆಯಾಗಿದ್ದು, 6,395 ಆನೆಗಳೊಂದಿಗೆ ಕರ್ನಾಟಕ ದೇಶದಲ್ಲಿಯೇ ಮೊದಲ ಸ್ಥಾನ ಪಡೆದಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ, ರಾಜ್ಯದಲ್ಲಿ ಆನೆಗಳ ಸಂಖ್ಯೆಯು ಕಳೆದ 6 ವರ್ಷಗಳಲ್ಲಿ ಶೇ. 346 ರಷ್ಟು ಹೆಚ್ಚಳವಾಗಿದೆ. ಈ ಮೂಲಕ ದೇಶದಲ್ಲೇ ಆನೆಗಳ ಸಂಖ್ಯೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ.
ಆನೆಗಳ ಗಣತಿಯ ವರದಿಯಲ್ಲಿ 2012 ಕ್ಕೆ ಹೋಲಿಸಿದರೆ 2017 ರಲ್ಲಿ ಆನೆಗಳ ಸಂಖ್ಯೆ ಕಡಿಮೆಯಾಗಿತ್ತು. 2023ರ ಗಣತಿಯಲ್ಲಿ ಆನೆಗಳ ಸಂಖ್ಯೆ ಹೆಚ್ಚಾಗಿದೆ. 2010 ರಲ್ಲಿ 5740 ಆನೆಗಳಿದ್ದರೆ, 2012 ರಲ್ಲಿ 6072 ಆನೆಗಳಿದ್ದವು. 2017ರಲ್ಇ 6049 ಇದ್ದು, 2023 ರಲ್ಲಿ ಆನೆಗಳ ಸಂಖ್ಯೆ 6397 ಕ್ಕೆ ಏರಿದೆ.