ಬೆಂಗಳೂರು :1 ರಿಂದ 8/ 6ರಿಂದ 8ನೇ ತರಗತಿಗಳನ್ನು ಹೊಂದಿರುವ ಶಾಲೆಗಳಲ್ಲಿ ಉನ್ನತೀಕರಿಸಿರುವ 9 ಮತ್ತು 10ನೇ ತರಗತಿಗಳನ್ನು ಪ್ರಾರಂಭಿಸಲು ಸಂಸ್ಥೆಯು ಹೊಂದಿರಬೇಕಾದ ಅಗತ್ಯ ನಿವೇಶನ ಮತ್ತು ಇತರ ಮಾನದಂಡಗಳ ಕುರಿತು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಸೆಕ್ಷನ್ 30 ಮತ್ತು 31 ರಡಿಯಲ್ಲಿ ಪುದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಶಿಕ್ಷಣ ಸಂಸ್ಥೆಗಳ (ವರ್ಗಿಕರಣ ಮತ್ತು ನೊಂದಣಿ) ನಿಯಮಗಳು, 1997ರ ನಿಯಮ 3 ರಡಿಯಲ್ಲಿ ಹೊರಡಿಸಲಾಗಿದ್ದ ಉಲ್ಲೇಖ-1 ರ ಅಧಿಸೂಚನೆಯಲ್ಲಿ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ 2009ರ ಸೆಕ್ಷನ್ 19 & 25ರಲ್ಲಿ ಶಾಲೆಯು ಹೊಂದಿರಬೇಕಾದ ಜಮೀನು ಸೇರಿದಂತೆ ಶಾಲಾ ಕಟ್ಟಡ ಹಾಗೂ ಮೂಲಭೂತ ಸೌಕರ್ಯಗಳನ್ನು ಮತ್ತು ಉಲ್ಲೇಖ-5 ರಲ್ಲಿ ಹೊರಡಿಸಲಾಗಿದ್ದ ಸುತ್ತೋಲೆಯಲ್ಲಿ ಹೊಸ ಶಾಲೆ ನೊಂದಣಿ ಸಂಬಂಧ ಅರ್ಥ ನೊಂದಾಯಿತ ಆಡಳಿತ ಮಂಡಳಿಗಳು ಮೂಲಕ ಪುಸ್ತಾವನೆಗಳನ್ನು ಸಲ್ಲಿಸುವ ದಿನಾಂಕವನ್ನು ನಿಗದಿಪಡಿಸಲಾಗಿತ್ತು.
ಈ ಕಛೇರಿ ಉಲ್ಲೇಖ-5ರ ಸುತ್ತೋಲೆಯಲ್ಲಿ ಉಲ್ಲೇಖ-1 ರ ಅಧಿಸೂಚನೆಯಲ್ಲಿ ಹೊಸ ಶಾಲೆ ಪ್ರಾರಂಭಿಸಲು ಅಗತ್ಯ ನಿವೇಶನ ವಿಸ್ತೀರ್ಣವನ್ನು ನಿಗದಿಪಡಿಸಲಾಗಿದೆ. ಅದರಂತೆ 1 ರಿಂದ 10ನೇ ತರಗತಿಯವರೆಗೆ ಶಾಲೆ ಪ್ರಾರಂಭಿಸಲು ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿ ಇತ್ಯಾದಿ ಪ್ರಾಧಿಕಾರದಿಂದ ಶೈಕ್ಷಣಿಕ ಉದ್ದೇಶಕ್ಕಾಗಿ ಪರಿವರ್ತನಗೊಂಡ 3000 ಚದರ ಮೀಟರ್ ಭೂಮಿ ಸ್ವಂತ ಹೆಸರಿನಲ್ಲಿ ಅಥವಾ 30 ವರ್ಷಗಳ ಲೀಸ್ ಅವಧಿಗೆ ಸಂಸ್ಥೆಯ ಹೆಸರಿಗೆ ನೊಂದಣಿಯಾಗಿರಬೇಕು. ಪೂರ್ವ ಪ್ರಾಥಮಿಕ ರಿಂದ 10ನೇ ತರಗತಿಯವರೆಗೆ ಒಂದೇ ಆವರಣದಲ್ಲಿ ಹೊಸದಾಗಿ ಶಾಲೆ ಪ್ರಾರಂಭಿಸಲು 4000 ಚದರ ಮೀಟರ್ ಹೊಂದಿರಬೇಕು.
ಬೆಂಗಳೂರು ಬೃಹತ್ ಮಹಾನಗರ ಪಾಲಿಕ ವ್ಯಾಪ್ತಿಯಲ್ಲಿ ನಗರಸಭೆ/ಪುರಸಭೆ/ಪಟ್ಟಣ ಪಂಚಾಯಿತಿ/ ಮಹಾನಗರ ಪಾಲಿಕೆಗಳ ವ್ಯಾಪ್ತಿಯ ಪುದೇಶಗಳಲ್ಲಿ 1 ರಿಂದ 10ನೇ ತರಗತಿ ಶಾಲೆಗಳಿಗೆ ಶೈಕ್ಷಣಿಕ ಉದ್ದೇಶಕ್ಕಾಗಿ ಪರಿವರ್ತನೆಗೊಂಡ1500 ಚದರ ಮೀಟರ್ ಭೂಮಿ ಸ್ವಂತ ಹೆಸರಿನಲ್ಲಿ ಅಥವಾ 30 ವರ್ಷಗಳ ಲೀಸ್ ಅವಧಿಗೆ ಸಂಸ್ಥೆಯ ಹೆಸರಿಗೆ ನೊಂದಣಿಯಾಗಿರಬೇಕು. ಪೂರ್ವ ಪ್ರಾಥಮಿಕ ರಿಂದ 10ನೇ ತರಗತಿಯವರೆಗೆ ಶಾಲೆಗಳಿಗೆ 2000 ಚದರ ಮೀಟರ್ ಭೂಮಿ ಸ್ವಂತ ಹೆಸರಿನಲ್ಲಿ ಅಥವಾ 30 ವರ್ಷಗಳ ಲೀಸ್ ಅವಧಿಗೆ ಸಂಸ್ಥೆಯ ಹೆಸರಿಗೆ ನೊಂದಣಿಯಾಗಿರಬೇಕು ಎಂದು ನಿಗದಿಪಡಿಸಿದ.
ಮುಂದುವರೆದು, ಉಲ್ಲೇಖ-1ರ ಅಧಿಸೂಚನೆಯಲ್ಲಿ 2017-18ನೇ ಸಾಲಿನವರೆಗೆ ನೊಂದಣಿ ಪಡೆದು ನಡೆಯುತ್ತಿರುವ ಶಾಲೆಗಳಿಗೆ ಮೇಲೆ ತಿಳಿಸಲಾದ ನಿವೇಶನದ ಅಳತೆ ಅನ್ವಯಿಸುವುದಿಲ್ಲ. ಆದರೆ ಶಿಕ್ಷಣ ಹಕ್ಕು ಕಾಯ್ದೆ-2009 ರ ಅನ್ವಯ ನಿಗದಿಪಡಿಸಿರುವ ಅಳತೆಯ ನಿವೇಶನ ಲಭ್ಯಗೊಳಿಸಬೇಕು ಎಂದು ಉಲ್ಲೇಖಿಸಲಾಗಿದೆ.
ಉಲ್ಲೇಖ-2ರ ಸರ್ಕಾರದ ಅಧಿಸೂಚನೆ ಸಂಖ್ಯೆ: ಇಡಿ 08 ಎಸ್ ಇ ಎಸ್ 2022 ದಿನಾಂಕ: 03.11.2022ರಲ್ಲಿ ಯಾವುದೇ ಶಾಲೆಯಲ್ಲಿ 1 ರಿಂದ 8ನೇ ತರಗತಿ ಅಥವಾ 6 ರಿಂದ 8 ನೇ ತರಗತಿ ನಡೆಯುತ್ತಿದ್ದು, 9 ಮತ್ತು 10ನೇ ತರಗತಿಗಳನ್ನು ಪ್ರಾರಂಭಿಸಲು ಬಯಸಿದಲ್ಲಿ 9 ಮತ್ತು 10ನೇ ತರಗತಿಗಳನ್ನು ನೂಂದಣಿ ಮತ್ತು ಮಾನ್ಯತೆ ಉದ್ದೇಶಕ್ಕಾಗಿ ಉನ್ನತೀಕರಣ ಅಥವಾ ಮುಂದುವರೆದ ಶಿಕ್ಷಣ ಎಂದು ಪರಿಗಣಿಸಿ ಅನುಮತಿ ನೀಡುವುದು ಎಂದು ನಿಯಮದಲ್ಲಿ ತಿದ್ದುಪಡಿ ಮಾಡಲಾಗಿದೆ.