ಬೆಂಗಳೂರು : ರಾಜ್ಯ ಸರ್ಕಾರವು ಅಕ್ಟೋಬರ್ 1 ರಿಂದ ರಾಜ್ಯದ ಎಲ್ಲ ತಹಸಿಲ್ದಾರ್ ಹಂತದವರೆಗೆ ಎಲ್ಲ ಕಂದಾಯ ಇಲಾಖೆ ಕಚೇರಿಗಳಲ್ಲಿ ಇ-ಆಫೀಸ್ ತಂತ್ರಾಂಶ ಜಾರಿಗೆ ತರಲು ಸಿದ್ಧತೆ ನಡೆಸಿದೆ.
ಅಕ್ಟೋಬರ್ 1 ರೊಳಗೆ ತಹಸಿಲ್ದಾರ ಹಂತದವರೆಗೆ ಎಲ್ಲ ಕಂದಾಯ ಇಲಾಖೆ ಕಚೇರಿಗಳಲ್ಲಿ ಇ-ಆಫೀಸ್ ತಂತ್ರಾಂಶ ಅಳವಡಿಸಿಕೊಳ್ಳಲು ಸೂಚಿಸಿದರು. ರೆಕಾರ್ಡ್ ರೂಮ್ ನ ಎಲ್ಲ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿ, ತಂತ್ರಾಂಶದಲ್ಲಿ ಅಳವಡಿಸುವ ಪ್ರಕ್ರಿಯೆ ರಾಜ್ಯದಾದ್ಯಂತ ಆರಂಭವಾಗಲಿದೆ. ಈ ಕುರಿತು ಈಗಾಗಲೇ ಕ್ರಮಕೈಗೊಳ್ಳಲಾಗಿದೆ.
ರಾಜ್ಯ ಸರ್ಕಾರದ ಈ ಕ್ರಮದಿಂದ ದಾಖಲಾತಿಗಾಗಿ ಕಚೇರಿಗೆ ಅಲೆಯುವ ಜನರಿಗೆ ದೊಡ್ಡ ಪರಿಹಾರ ಸಿಕ್ಕಂತಾಗಿದೆ. ಇ-ಆಫೀಸ್ ತಂತ್ರಾಂಶ ಜಾರಿಯಾದ್ರೆ 10 ನಿಮಿಷದಲ್ಲೇ ಎಲ್ಲಾ ದಾಖಲೆಗಳು ಸಿಗಲಿವೆ.