ಚಿಕ್ಕಮಗಳೂರು : ರಾಜಕಾರಣದಲ್ಲಿ ಮಾಜಿ ಸಚಿವ ಸಿ.ಟಿ. ರವಿ ಮಾಸ್ಟರ್ ಮೈಂಡ್ ಉಗ್ರ ಎಂದು ಕರ್ನಾಟಕ ಕಿಸಾನ್ ಘಟಕದ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸಿ.ಟಿ. ರವಿ ಅವರು ಕುಕ್ಕರ್ ಬಾಂಬ್ ಸ್ಪೋಟಿಸಿದ್ದ ಶಂಕಿತ ಉಗ್ರ ಶಾರಿಕ್ ಗಿಂತ ಒಂದು ಕೈ ಮೇಲಿದ್ದಾರೆ. ಅವರು ತಮ್ಮ ರಾಜಕೀಯ ಜೀವನದಲ್ಲಿ ಹಲವರನ್ನು ಬಲಿ ಕೊಟ್ಟಿದ್ದಾರೆ. ಹೀಗಾಗಿ ಅವರನ್ನು ರಾಜಕಾರಣದ ಮಾಸ್ಟರ್ ಮೈಂಡ್ ಉಗ್ರ ಆಗಿದ್ದಾರೆ ಎಂದು ಸಚಿನ್ ಮೀಗಾ ಹೇಳಿದ್ದಾರೆ.
ಸಿ.ಟಿ. ರವಿ ಗೋರಿ ದರ್ಗಾಗಳನ್ನು ಸಂಚಿನಲ್ಲಿ ಧ್ವಂಸ ಮಾಡಿಸಿದ್ದಾರೆ. ಸಿ.ಟಿ. ರವಿಯನ್ನು ಚಿಕ್ಕಮಗಳೂರು ಜನತೆಗೆ ಮನೆಗೆ ಕಳಿಸಿದ್ದಾರೆ. ಇಂಥ ವಿಕೃತ ಹೇಳಿಕೆಗಳಿಂದ ಸಿ.ಟಿ. ರವಿ ಖುಷಿ ಪಡುತ್ತಾರೆ. ಉಗ್ರ ಸಿ.ಟಿ. ರವಿಯನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದ್ದಾರೆ.