ಬೆಂಗಳೂರು : ಇತ್ತೀಚೆಗೆ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಗೆ 27 ಲಕ್ಷ ಹೆಚ್ಚುವರಿ ಮತಗಳು ಬಂದಿವೆ ಎಂದು ಚುನಾವಣಾ ಆಯೋಗ ವರದಿ ತಿಳಿಸಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ-2023 ರ ಅಂಕಿ ಅಂಶಗಳ ವರದಿಯನ್ನು ಚುನಾವಣಾ ಆಯೋಗ ಪ್ರಕಟಿಸಿದ್ದು, ಈ ಚುನಾವಣೆಯಲ್ಲಿ ಬಿಜೆಪಿಗಿಂತ ಕಾಂಗ್ರೆಸ್ 27 ಲಕ್ಷ ಹೆಚ್ಚುವರಿ ಮತಗಳನ್ನು ಪಡೆದಿದೆ ಎಂದು ವರದಿಯಾಗಿದೆ.
ಚುನಾವಣಾ ಆಯೋಗದ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಆರು ರಾಷ್ಟ್ರೀಯ ಪಕ್ಷ, ಒಂದು ಪ್ರಾದೇಶಿಕ ಪಕ್ಷ, ಇತರೆ 9 ಪಕ್ಷಗಳು ಸೇರಿ 93 ಪಕ್ಷಗಳು ಕಣದಲ್ಲಿದ್ದವು. ಒಟ್ಟು 2,615 ಮಂದಿ ಸ್ಪರ್ಧಿಸಿದ್ದರು, ಇದರಲ್ಲಿ 917 ಮಂದಿ ಪಕ್ಷೇತರರು, ಇವರ ಪೈಕಿ 211 ಮಂದಿ ಠೇವಣಿ ಕಳೆದುಕೊಂಡಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 3,88,85,418 ಮತಗಳು ಚಲಾವಣೆಗೊಂಡಿದ್ದು, ಮತಗಳಿಕೆಯಲ್ಲಿ ಬಿಜೆಪಿ 1,40,96,604 (ಶೇ.36) ಮತ ಪಡೆದುಕೊಂಡರೆ, ಕಾಂಗ್ರೆಸ್ 1,67,89,305 (ಶೇ.42.88) ಮತಗಳನ್ನು ಪಡೆದಿವೆ.