ಬೆಂಗಳೂರು : ಕೃಷಿ ಸಚಿವ ಸಿ.ಎಸ್. ಚಲುವರಾಸ್ವಾಮಿ ವಿರುದ್ಧ ಇದೀಗ ಬಿಜೆಪಿ ಪೇ ಸಿಎಸ್ ಎಂಬ ಅಭಿಯಾನವನ್ನು ಆರಂಭಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಲಂಚಕ್ಕೆ ಬೇಡಿಕೆ ಇಟ್ಟ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಬಿಜೆಪಿ ಸಪೋರ್ಟ್ ಎಂಬ ಗ್ರೂಪ್ ನಲ್ಲಿ ಕೃಷಿ ಸಚಿವರ ಫೋಟೋ ಬಳಸಿಕೊಂಡು ಕ್ಯೂ ಆರ್ ಕೋಡ್ ಮೂಲಕ ಪೇ ಸಿಎಸ್ ಎಂಬ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಪೇಸಿಎಸ್ ಪೋಸ್ಟರ್ ನಲ್ಲಿ ಕ್ಯೂಆರ್ ಕೋಡ್ ಬಳಕೆ ಮಾಡಿಕೊಂಡು ಪೇಸಿಎಸ್ ಎಂದು ಮಾಡಿ 6 ರಿಂದ 8 ಲಕ್ಷ ರೂಪಾಯಿ ಲಂಚ ಪಡೆಯಲಾಗುತ್ತದೆ ಎಂದು ಬರೆಯಲಾಗಿದೆ.