ಇಂಫಾಲ್: ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಮತ್ತೊಂದು ಭಯಾನಕ ಅತ್ಯಾಚಾರ ಮತ್ತು ಚಿತ್ರಹಿಂಸೆ ಪ್ರಕರಣ ಬೆಳಕಿಗೆ ಬಂದಿದ್ದು, ಮಹಿಳೆಯೊಬ್ಬಳು ತನ್ನ ಮೇಲೆ ಐದರಿಂದ 6 ಜನರಿದ್ದ ಗುಂಪುವೊಂದು ಸಾಮೂಹಿಕ ಅತ್ಯಾಚಾರ ನಡೆಸಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾಳೆ.
ಪರಿಹಾರ ಶಿಬಿರದಲ್ಲಿ ವಾಸಿಸುತ್ತಿರುವ ಸಂತ್ರಸ್ತೆ ಪೊಲೀಸರಿಗೆ ವಿವರವಾದ ದೂರು ನೀಡಿದ್ದು, ಮೇ 3 ರಂದು ನಡೆದ ಅಪರಾಧವನ್ನು ಬಹಿರಂಗಪಡಿಸಿದ್ದಾರೆ. ಐದರಿಂದ ಆರು ಜನರಿದ್ದ ಗುಂಪುವೊಂದು ನನ್ನ ಮನೆ ಮೇಲೆ ದಾಳಿ ಮಾಡಿ ಮನೆಗೆ ಬೆಂಕಿ ಹಚ್ಚಿದ್ದರು. ಬಳಿಕ ನಾನು ಕುಟುಂಬಸ್ಥರೊಂದಿಗೆ ಓಡಿ ಹೋಗುವಾಗ ನನ್ನನ್ನು ಹಿಡಿದು ನಿಂದಿಸಲು ಮತ್ತು ಹೊಡೆಯಲು ಪ್ರಾರಂಭಿಸಿದರು” ಎಂದು 37 ವರ್ಷದ ವಿವಾಹಿತ ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ.
ಐದರಿಂದ 6 ಜನರಿದ್ದ ಗುಂಪುವೊಂದು ನನಗೆ ಲೈಂಗಿಕ ಕಿರುಕುಳ ನೀಡಲು ಪ್ರಾರಂಭಿಸಿದರು. ಅವರು ಹಿಂಸಾತ್ಮಕವಾಗಿ ನನ್ನ ಅತ್ಯಾಚಾರಕ್ಕೆ ಪ್ರಯತ್ನ ಪಡುತ್ತಿದ್ದರು. ಸಹಾಯಕ್ಕಾಗಿ ನನ್ನ ಕಿರುಚಾಟದ ಹೊರತಾಗಿಯೂ, ಯಾರಿಂದಲೂ ಯಾವುದೇ ಸಹಾಯ ಸಿಗಲಿಲ್ಲ. ಆ ಸಮಯದಲ್ಲಿ, ನಾನು ಪ್ರಜ್ಞಾಹೀನನಾಗಿದ್ದೆ. ನಂತರ ನಾನು ಪ್ರಜ್ಞೆ ಮರಳಿದಾಗ, ಒಂದು ಮನೆಯಲ್ಲಿ ಕೆಲವು ಮೈಟಿ ಜನರು ನನ್ನನ್ನು ಸುತ್ತುವರೆದು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಈಶಾನ್ಯ ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ದಿನವಾದ ಮೇ 3 ರಂದು ನಡೆದ ಭಯಾನಕ ಘಟನೆಯನ್ನು ವಿವರಿಸಿ ಚುರಾಚಂದ್ಪುರ ಜಿಲ್ಲೆಯ ಮಹಿಳೆ ಗುರುವಾರ ಬಿಷ್ಣುಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಮತ್ತು ಪ್ರತ್ಯೇಕ ವಿವರವಾದ ದೂರು ದಾಖಲಿಸಿದ್ದಾರೆ.