alex Certify BIGG NEWS : 2022ರ ಹುಲಿಗಣತಿ ಬಿಡುಗಡೆ : ಮಧ್ಯಪ್ರದೇಶ ನಂ.1, ಕರ್ನಾಟಕ ನಂ.2 | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIGG NEWS : 2022ರ ಹುಲಿಗಣತಿ ಬಿಡುಗಡೆ : ಮಧ್ಯಪ್ರದೇಶ ನಂ.1, ಕರ್ನಾಟಕ ನಂ.2

ನವದೆಹಲಿ : 2022 ನೇ ಸಾಲಿನ ರಾಷ್ಟ್ರೀಯ ಹುಲಿ ಗಣತಿ ವರದಿ ಬಿಡುಗಡೆಯಾಗಿದ್ದು, ದೇಶದ ಅರಣ್ಯ ಪ್ರದೇಶಗಳಲ್ಲಿ ಒಟ್ಟು 3,682 ಹುಲಿಗಳಿವೆ ಎಂದು ಅಂದಾಜಿಸಲಾಗಿದ್ದು, ಈ ಪೈಕಿ 785 ಹುಲಿಗಳೊಂದಿಗೆ ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದ್ದರೆ, 563 ಹುಲಿಗಳೊಂದಿಗೆ ಕರ್ನಾಟಕ 2 ನೇ ಸ್ಥಾನ ಪಡೆದುಕೊಂಡಿದೆ.

ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮತ್ತು ಭಾರತೀಯ ವನ್ಯಜೀವಿ ಸಂಸ್ಥೆ ಅಖಿಲ ಭಾರತ ಹುಲಿ ಗಣತಿ ವರದಿಯನ್ನು ಬಿಡುಗಡೆ ಮಾಡಿದ್ದು,2022ನೇ ಸಾಲಿನ ವರದಿ ಅನ್ವಯ 2018 ರಲ್ಲಿ 2967 ಹುಲಿಗಳ ಸಂಖ್ಯೆ 2022 ರಲ್ಲಿ 3682 ಕ್ಕೆ ತಲುಪಿದೆ. ಅಂದರೆ ವಿಶ್ವದ ಒಟ್ಟು ಹುಲಿಗಳ ಪೈಕಿ ಶೇ. 75 ರಷ್ಟು ಭಾರತವೇ ಆವಾಸ ಸ್ಥಾನವಾಗಿದೆ. ಗಣತಿ ಅನ್ವಯ ಭಾರತದಲ್ಲಿ ಗರಿಷ್ಠಿ 3925 ಹುಲಿಗಳಿರಬಹುದು ಎಂದು ವರದಿಯಲ್ಲಿ ಅಂದಾಜಿಸಲಾಗಿದೆ.

2018ರಲ್ಲಿ ಕರ್ನಾಟಕ 524 ಹುಲಿಗಳ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಮಧ್ಯಪ್ರದೇಶ 526 ಹುಲಿಗಳೊಂದಿಗೆ ಮೊದಲ ಸ್ಥಾನದಲ್ಲಿತ್ತು. ಅಂತಾರಾಷ್ಟ್ರೀಯ ಹುಲಿ ದಿನಾಚರಣೆಗೂ ಮುನ್ನ ಅರಣ್ಯ ಸಚಿವ ಈಶ್ವರ ಖಂಡ್ರೆ ಅಖಿಲ ಭಾರತ ಹುಲಿ ಅಂದಾಜು (ಎಐಟಿಇ) 2022 ರ ಅಂಕಿಅಂಶಗಳನ್ನು ಬಿಡುಗಡೆ ಮಾಡಿದರು. ರಾಜ್ಯದ ಅರಣ್ಯ ಇಲಾಖೆ 2022 ರಲ್ಲಿ 31 ಜಿಲ್ಲೆಗಳ ಎಲ್ಲಾ 37 ಅರಣ್ಯ ವಿಭಾಗಗಳಲ್ಲಿ ಹುಲಿ ಅಂದಾಜು ಕಾರ್ಯವನ್ನು ನಡೆಸಿತ್ತು. 2018ರಲ್ಲಿ ಕರ್ನಾಟಕ 524 ಹುಲಿಗಳ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಮಧ್ಯಪ್ರದೇಶ 526 ಹುಲಿಗಳೊಂದಿಗೆ ಮೊದಲ ಸ್ಥಾನದಲ್ಲಿತ್ತು. 2018-22ರ ಸಮೀಕ್ಷೆಯ ಪ್ರಕಾರ ಕರ್ನಾಟಕದ 5 ಹುಲಿ ಸಂರಕ್ಷಿತ ಪ್ರದೇಶಗಳ ಪೈಕಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶವು ಅತಿಹೆಚ್ಚು ಅಂದರೆ 149 ಹುಲಿಗಳನ್ನು ಹೊಂದಿದೆ. ನಂತರದ ಸ್ಥಾನದಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ 143 ಹುಲಿಗಳಿವೆ. ಇದರಿಂದ ಒಟ್ಟಾರೆ ಕರ್ನಾಟಕದಲ್ಲಿ 2022ರ ಹೊತ್ತಿಗೆ ಹುಲಿಗಳ ಸಂಖ್ಯೆ 4563ಕ್ಕೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...