
ರಾಮನಗರ : ರೈಲುಗಳ ಮೇಲೆ ಕಲ್ಲು ಎಸೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಇದಕ್ಕೆ 10 ವರ್ಷ ಜೈಲುಶಿಕ್ಷೆಗೆ ಅವಕಾಶವಿದೆ ಎಂದು ರೈಲ್ವೆ ಭದ್ರತಾ ಹಿರಿಯ ಆಯುಕ್ತ ದೇವಾಂಶ್ ಶುಕ್ಲಾ ಹೇಳಿದ್ದಾರೆ.
ರಾಮನಗರದ ಗೌಸಿಯಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲವರು ರೈಲುಗಳ ಮೇಲೆ ಕಲ್ಲು ಎಸೆಯುತ್ತಾರೆ. ಇದರಿಂದ ರೈಲು ಮತ್ತು ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ಕೆಲವರು ಕಣ್ಣು ಕಳೆದುಕೊಂಡ ಉದಾಹರಣೆಯೂ ಇದೆ. ಕಲ್ಲೇಟು ತಿಂದವರ ಪ್ರಾಣವೂ ಹೋಗುವ ಸಾಧ್ಯತೆ ಇರುತ್ತದೆ ಎಂದರು.
ಕಲ್ಲು ಎಸೆಯುವ ಕೃತ್ಯಗಳು ಕಂಡು ಬಂದ ತಕ್ಷಣವೇ ತಡೆಯುವ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕು. ಇಲ್ಲವೇ ರೈಲ್ವೆ ಪೊಲೀಸರ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದ್ದಾರೆ.