ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ರಾಜ್ಯಾದ್ಯಂತ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಯೋಜನೆ ಆರಂಭವಾಗಿ 1 ತಿಂಗಳು ಕಳೆದಿದ್ದು, ಈವರೆಗೆ ಬರೋಬ್ಬರಿ 15.57 ಕೋಟಿ ಮಹಿಳೆಯರು ರಾಜ್ಯದ ಸಾರಿಗೆ ಸಂಸ್ಥೆಗಳ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣ ನಡೆಸಿ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ.
ಶಕ್ತಿ ಯೋಜನೆಗೆ ಜೂನ್ 11 ರಂದು ರಾಜ್ಯ ಸರ್ಕಾರ ಚಾಲನೆ ನೀಡಿ ಇಂದಿಗೆ ನಾಲ್ಕು ವಾರ ಪೂರ್ಣಗೊಂಡಿದ್ದು, ಆರಂಭದಿಂದ ಈವರೆಗೆ ರಾಜ್ಯದ ಸಾರಿಗೆ ಸಂಸ್ಥೆಗಳ ಬಸ್ ಗಳಲ್ಲಿ 15.57 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣ ನಡೆಸಿ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ ಎಂದು ಸಾರಿಗೆ ನಿಗಮ ಮಾಹಿತಿ ನೀಡಿದೆ.
ಶಕ್ತಿ ಯೋಜನೆಯಡಿ ಜೂನ್ 11 ರಿಂದ ಈವರೆಗೆ ಒಟ್ಟಾರೆ 368.22 ಕೋಟಿ ರೂ. ಮೊತ್ತದ ಟಿಕೆಟ್ ಅನ್ನು ಮಹಿಳಾ ಪ್ರಯಾಣಿಕರು ಪಡೆದುಕೊಂಡಿದ್ದು, ಮೊದಲ ವಾರ 4 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದರು, ಎರಡನೇ ವಾರ 7.15 ಕೋಟಿ, ಮೂರನೇ ವಾರ 11.54 ಕೋಟಿ, ನಾಲ್ಕನೇ ವಾರ 15.57 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ.