ಬಿಗ್ ಬಾಸ್ ಒಟಿಟಿಯಿಂದಲೂ ಪ್ರಾಂಕ್ ಮಾಡಿಕೊಂಡಿದ್ದ ರಾಕೇಶ್ ಇದೀಗ ಬಿಗ್ ಬಾಸ್ 9 ರಲ್ಲೂ ಅದನ್ನು ಮುಂದುವರೆಸಿದ್ದಾರೆ. ಆದರೆ ಅದೇ ಅವರಿಗೆ ಮುಳ್ಳಾಗುತ್ತೆ ಅಂತ ಯಾರೂ ಅಂದುಕೊಂಡಿರಲಿಲ್ಲ ಅನ್ಸುತ್ತೆ. ಬಿಗ್ ಬಾಸ್ ಹೆಸರನ್ನು ಬಳಸಿಕೊಂಡು ಪ್ರಾಂಕ್ ಮಾಡಲು ಹೋಗಿ ತಾವೇ ಅದರ ಪಾಠ ಕಲಿಯುವ ಸ್ಥಿತಿ ತಲುಪಿದ್ದಾರೆ ಬಿಗ್ ಬಾಸ್ ಮಂದಿ.
ಹೌದು, ರಾಕೇಶ್ ಅಡಿಗ ಮತ್ತು ಅನುಪಮಾ ಗೌಡ ತಮ್ಮ ಪ್ರಾಂಕ್ ಮಾಡಲು ಮುಂದಾಗಿದ್ದರು. ಅದು ಬಿಗ್ ಬಾಸ್ ಹೆಸರನ್ನೇ ಬಳಸಿಕೊಂಡು ಪ್ರಾಂಕ್ ಮಾಡಿದ್ದಾರೆ. ರೂಲ್ ಬುಕ್, ನಿಯಮ ಅಂತ ಹೇಳಿ ಆರ್ಯವರ್ಧನ್ ಗುರೂಜಿರನ್ನ ಏಮಾರಿಸಿದರು. ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ 8 ಮಂದಿ ಪೈಕಿ 4 ಮಂದಿಯನ್ನ ಆಯ್ಕೆ ಮಾಡಬೇಕು ಅಂತ ಆರ್ಯವರ್ಧನ್ ಗುರೂಜಿಗೆ ಫೂಲ್ ಮಾಡಿದರು.
ಕ್ಯಾಪ್ಟನ್ಸಿ ಟಾಸ್ಕ್ ಆಯ್ಕೆ ವಿಚಾರವಾಗಿ ನಡೆದ ಪ್ರಾಂಕ್ ಇದೀಗ ಅವರಿಗೆ ಸರಿಯಾಗಿ ಏಟು ಕೊಟ್ಟಿದೆ. ಪ್ರಾಂಕ್ ಮಾಡಿದವರಿಗೆ ಬಿಗ್ ಬಾಸ್ ದೊಡ್ಡ ಶಾಕ್ ಕೊಟ್ಟಿದ್ದಾರೆ. ಪ್ರಾಂಕ್‌ನಲ್ಲಿ ಆಯ್ಕೆ ಆದ ನಾಲ್ಕು ಮಂದಿ ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆ ಆಗಿದ್ದಾರೆ ಎಂದು ಬಿಗ್ ಬಾಸ್ ಘೋಷಿಸಿದ್ದಾರೆ. ಈ ಮಾತಿನಿಂದ ಮನೆಯವರೆಲ್ಲಾ ಶಾಕ್ ಆಗಿದ್ದಾರೆ.