ಬೆಂಗಳೂರು : ಕನ್ನಡದ ಬಿಗ್ ಬಾಸ್ ಸೀಜನ್-10ರ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ಬಿಗ್ ಬಾಸ್ ಮನೆಯಿಂದಲೇ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಹುಲಿ ಉಗುರು ಧರಿಸಿರುವ ಆರೋಪದ ಮೇಲೆ ವರ್ತೂರು ಸಂತೋಷ್ ಅವರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ.
ವರ್ತೂರು ಸಂತೋಷ್ ಧರಿಸಿದ್ದು ಹುಲಿ ಉಗುರು ಎಂಬುದು ಖಚಿತವಾಗಿದೆ. ಬಿಗ್ ಬಾಸ್ ಮನೆಗೆ ಹೋಗಿ ನಾವು ಅವರನ್ನು ಬಂಧಿಸಿದ್ದೇವೆ,ಹಣ ಕೊಟ್ಟು ಖರೀದಿಸಿದ ಬಗ್ಗೆ ಮಾಹಿತಿಯಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಡಿಸಿಎಫ್ ರವೀಂದ್ರ ಹೇಳಿದ್ದಾರೆ.
ಒಂದು ವೇಳೆ ವಿಚಾರಣೆಯಲ್ಲಿ ಸಂತೋಷ್ ಧರಿಸಿದ್ದು, ಹುಲಿ ಉಗುರು ಎಂದು ಸಾಬೀತಾದರೆ 7 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ. ಹುಲಿ ಯೋಜನೆಯ ಪ್ರಕಾರ, ಹುಲಿಗಳನ್ನು ಸಾಕುವುದು, ಹುಲಿಗಳು ಹಾಗೂ ಅವುಗಳ ಬಲಿ ಪ್ರಾಣಿಗಳ ಬೇಟೆ, ಅವಾಸಸ್ಥಾನ ನಾಶ ಮತ್ತು ಅವುಗಳ ಕಳ್ಳಸಾಗಣೆ ಮಾಡುವುದು 1972 ರ ವನ್ಯಜೀವಿ ಸಂರಕ್ಷಣಾ ಅಧಿನಿಯಮದ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ.
ಸಂತೋಷ್ ಧರಿಸಿರುವ ಆ ಉಗುರು ಎಲ್ಲಿಂದ ಎಲ್ಲಿಗೆ ಬಂದಿದೆ ಎಂದು ತನಿಖೆ ಆಗುತ್ತ ಹೋಗುತ್ತದೆ.ಬಿಗ್ ಬಾಸ್ ನಡೆಸುವವರ ಮೇಲೂ ಆರೋಪ ಆಗಬಹುದು ಎನ್ನಲಾಗಿದೆ. ಹುಲಿ ಯೋಜನೆ ಪ್ರಕಾರ 7 ವರ್ಷ ಜೈಲು, 5 ರಿಂದ 50 ಲಕ್ಷ ಹಣ ದಂಡ ವಿಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಡಿಎನ್ಎ ಹುಲಿ ಮೂಳೆ, ಉಗುರಿಗೆ ಹೊಂದಾಣಿಕೆ ಆಗುವರೆಗೆ ಇದು ನಡೆಯುತ್ತದೆ. ಇದು ಒರಿಜನಲ್ ಆದರೆ ಸಂತೋಷ್ ಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಬಿಗ್ ಬಾಸ್ ಸ್ಪರ್ಧಿ ಸಂತೋಷ್ ಕತ್ತಿನಲ್ಲಿ ಚೈನು ಹಾಕಿಕೊಂಡಿದ್ದು, ಅದರಲ್ಲಿ ಹುಲಿ ಉಗುರು ಇದೆ . ಹುಲಿ ಉಗುರು ಧರಿಸಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸಂತೋಷ್ ಅವರನ್ನು ಬಂಧಿಸಿದ್ದಾರೆ.