
ಇತ್ತೀಚೆಗೆ ಮುಂಬೈನಲ್ಲಿ ತನ್ನ ರೆಸ್ಟೋರೆಂಟ್ ಪ್ರಾರಂಭಿಸಿದ ಅಬ್ದು ರೋಝಿಕ್ ಲೋಡೆಡ್ ಗನ್ ಹಿಡಿದು ಆಟವಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ಬಳಿಕ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಓಶಿವಾರದಲ್ಲಿರುವ ತನ್ನ ಹೊಸ ರೆಸ್ಟೋರೆಂಟ್ ‘ಬರ್ಗಿರ್’ ನಲ್ಲಿ ಅಬ್ದು ರೋಝಿಕ್ ಲೋಡೆಡ್ ಗನ್ನೊಂದಿಗೆ ಆಟವಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು.
ವರದಿಗಳ ಪ್ರಕಾರ ಗೋಲ್ಡನ್ ಬಾಯ್ಸ್ ಸನ್ನಿ ವಾಘ್ಚೋರ್ ಮತ್ತು ಸಂಜಯ್ ಗುರ್ಜರ್ ಅವರ ಅಂಗರಕ್ಷಕರು ಈ ಪಿಸ್ತೂಲ್ ಅನ್ನು ನೀಡಿದ್ದರು. ಅಂಗರಕ್ಷಕರು ಅದನ್ನು ಸಾಗಿಸಲು ಪರವಾನಗಿ ಹೊಂದಿದ್ದರೂ, ಅಬ್ದು ಗನ್ನೊಂದಿಗೆ ಆಟವಾಡುವುದು ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು ಎಂದು ನೆಟ್ಟಿಗರು ಟೀಕಿಸಿದ್ದರು.
ಕಾನೂನಿನ ಪ್ರಕಾರ ಪರವಾನಗಿ ಪಡೆದ ಬಂದೂಕು ಹೊಂದಿರುವ ವ್ಯಕ್ತಿಯು ತನ್ನ ಗನ್ ಅನ್ನು ಹಿಡಿದಿಟ್ಟುಕೊಳ್ಳಲು ಬೇರೆಯವರಿಗೆ ನೀಡುವಂತಿಲ್ಲ.
ಏತನ್ಮಧ್ಯೆ ಅಬ್ದು ತಂಡದ ವಕ್ತಾರರು ಅವರು ಕೆಲವು ಸೆಕೆಂಡುಗಳ ಕಾಲ ಬಂದೂಕನ್ನು ತೆಗೆದುಕೊಂಡು ಅದನ್ನು ತಕ್ಷಣವೇ ಕೆಳಗೆ ಇಟ್ಟರು. ಆದರೆ ಪತ್ರಕರ್ತರೊಬ್ಬರು ಇಡೀ ವೀಡಿಯೊದಿಂದ ಆ ಭಾಗವನ್ನು ಮಾತ್ರ ಅಬ್ದು ಅವರ ಖ್ಯಾತಿಗೆ ಹಾನಿ ಮಾಡುವ ಉದ್ದೇಶದಿಂದ ಅಂತರ್ಜಾಲದಲ್ಲಿ ಹಾಕಿದ್ದಾರೆಂದು ಆರೋಪಿಸಿದ್ದಾರೆ.
ಅಬ್ದು ಈಗ ಸುಳ್ಳು ಆರೋಪ ಹೊರಿಸಿದ ಪತ್ರಕರ್ತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಚಿಂತಿಸುತ್ತಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.