ಬೆಂಗಳೂರು : ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್, ನಟ ದರ್ಶನ್ ಅವರನ್ನು ಇಂದು ಪೊಲೀಸರು ಬಂಧಿಸಿದ್ದು, ಎಲ್ಲರೂ ಶಾಕ್ ಆಗಿದ್ದಾರೆ.
ಕೊಲೆ ಪ್ರಕರಣದಲ್ಲಿ ಜನಪ್ರಿಯ ಸ್ಟಾರ್ ನಟ ಭಾಗಿಯಾಗಿದ್ದಾರೆಂದರೆ ನಿಜಕ್ಕೂ ನಂಬುವುದು ಕಷ್ಟ..ಏನಿದು ಕೊಲೆ ಪ್ರಕರಣ..? ನಿಜಕ್ಕೂ ನಡೆದಿದ್ದೇನು..? ಕೊಲೆ ಆಗಿದ್ದು ಯಾರು..? ಇಲ್ಲಿದೆ ಕಂಪ್ಲೀಟ್ ಮಾಹಿತಿ.
ಪ್ರಕರಣದ ಹಿನ್ನೆಲೆ..!
ಬೆಂಗಳೂರಿನ ಕಾಮಾಕ್ಷಿ ಪಾಳ್ಯದ ಮೋರಿ ಸಮೀಪ ಶವವೊಂದು ಪತ್ತೆಯಾಗಿತ್ತು. ಅದನ್ನು ನಾಯಿಗಳು ಕಿತ್ತು ಎಳೆಯುತ್ತಿದ್ದವು. ಕೂಡಲೇ ಸ್ಥಳಕ್ಕೆ ಬಂದ ಕಾಮಾಕ್ಷಿ ಪಾಳ್ಯ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ, ಬಳಿಕ 30 ರಿಂದ 35 ವರ್ಷದೊಳಗಿನ ವ್ಯಕ್ತಿಯ ಶವವನ್ನು ಮಹಜರು ನಡೆಸಲು ಕಳುಹಿಸಿದರು. ಆರಂಭದಲ್ಲಿ ಇದು ಅಸಹಜ ಸಾವು ಎಂದು ದಾಖಲಿಸಿ, ಆತ್ಮಹತ್ಯೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು. ನಂತರ ಇದು ಕೊಲೆ ಎಂಬುದು ಧೃಡವಾಗಿದ್ದು, ತನಿಖೆ ನಡೆಸಿದ ಪೊಲೀಸರು ಅಸಲಿ ಸತ್ಯವನ್ನು ಬಯಲು ಮಾಡಿದ್ದಾರೆ.
ಕೊಲೆಯಾದ ವ್ಯಕ್ತಿಯನ್ನು ಚಿತ್ರದುರ್ಗದ ರೇಣುಕಾ ಸ್ವಾಮಿ ಎಂದು ಗುರುತಿಸಿದ ಪೊಲೀಸರು ತನಿಖೆ ನಡೆಸಿದ್ದಾರೆ. ಕೂಡಲೇ ಗಿರಿನಗರ ಮೂಲದ ಮೂವರು ತಾವೇ ಈ ಕೃತ್ಯವೆಸಗಿದ್ದಾಗಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ. ಮೊದಲು ಆರೋಪಿಗಳು ತಾವು ಹಣಕಾಸಿ ವಿಚಾರಕ್ಕೆ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದರು. ನಂತರ ತನಿಖೆ ತೀವ್ರಗೊಂಡಾಗ ಅಸಲಿ ಸತ್ಯ ಬಯಲಾಗಿದೆ. ಮತ್ತಷ್ಟು ಸ್ಪೋಟಕ ಸತ್ಯಗಳು ಹೊರಬಿದ್ದಿವೆ.
ಚಿತ್ರದುರ್ಗದ ರೇಣುಕಾ ಸ್ವಾಮಿ ( ಕೊಲೆಯಾದ ವ್ಯಕ್ತಿ) ದರ್ಶನ್ ಆಪ್ತೆ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ, ಫೋಟೋ ಕಳುಹಿಸಿದ್ದನು ಎನ್ನಲಾಗಿದೆ. ಪವಿತ್ರ ಗೌಡ ಕೂಡ ಈ ವಿಚಾರವನ್ನು ದರ್ಶನ್ ಗಮನಕ್ಕೆ ತಂದಿದ್ದರು ಎನ್ನಲಾಗಿದೆ. ನಂತರ ಯಾರೋ ಒಬ್ಬರು ಚಿತ್ರದುರ್ಗದ ದರ್ಶನ್ ಅಭಿಮಾನಿಗಳ ಸಂಘದ ರಾಘವೇಂದ್ರ ಎಂಬುವವರಿಗೆ ಕರೆ ಮಾಡಿ ಈ ವಿಚಾರ ತಿಳಿಸಿದ್ದಾರೆ. ನಂತರ ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ಬೆಂಗಳೂರಿಗೆ ಕರೆಸಿಕೊಂಡು ಕಾರ್ ಶೆಡ್ ಒಂದರಲ್ಲಿ ಹಲ್ಲೆ ನಡೆಸಲಾಗಿದೆ. ನಾಲ್ಕು ಮಂದಿ ರೇಣುಕಾ ಸ್ವಾಮಿಗೆ ಹಲ್ಲೆ ಮಾಡಿದ್ದು, ಈ ವೇಳೆ ನಟ ದರ್ಶನ್ ಕೂಡ ಸ್ಥಳದಲ್ಲಿದ್ದರು ಎನ್ನಲಾಗಿದೆ. ಅವರ ಸೂಚನೆ ಮೇರೆಗೆ ರೇಣುಕಾ ಸ್ವಾಮಿಯನ್ನು ಕೊಲೆ ಮಾಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಕೊಲೆ ಪ್ರಕರಣ ವಿಚಾರವಾಗಿ ಇಂದು ಪೊಲೀಸರು ಮೈಸೂರಿನ ದರ್ಶನ್ ಫಾರ್ಮ್ ಹೌಸ್ ನಲ್ಲಿ ದರ್ಶನ್ ಅವರನ್ನು ಬಂಧಿಸಲಾಗಿದೆ.ಜೊತೆಗೆ ಪವಿತ್ರಾ ಗೌಡ ಅವರನ್ನು ಕೂಡ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪವಿತ್ರ ಗೌಡ ಅವರಿಗೆ ಅಶ್ಲೀಲವಾಗಿ ಮೆಸೆಜ್ ಮಾಡಿದ್ದ ಎನ್ನಲಾಗುತ್ತಿರುವ ರೇಣುಕಸ್ವಾಮಿ ಅವರನ್ನು ಬೆಂಗಳೂರಿಗೆ ಕರೆಯಿಸಲಾಗಿದೆ. ಜೂನ್ 8ರಂದು ಆತನನ್ನು ಶೆಡ್ ನಲ್ಲಿ ಇರಿಸಿ ಕೊಲೆ ಮಾಡಲಾಗಿದೆ. ಜೂನ್ 09 ರಂದು ಕೊಲೆ ಮಾಡಲಾಗಿದೆ.
ದರ್ಶನ್ ಆಪ್ತರಾದ ಪವಿತ್ರ ಗೌಡ ಅವರಿಗೆ ಅಶ್ಲೀಲವಾಗಿ ಮೆಸೆಜ್ ಮಾಡಿದ್ದ ಎನ್ನಲಾದ ರೇಣುಕಸ್ವಾಮಿಯನ್ನು ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಚಿತ್ರದುರ್ಗದ ರೇಣುಕಸ್ವಾಮಿಯನ್ನು ಬೆಂಗಳೂರಿಗೆ ಕರೆಯಿಸಿ ಕೊಲೆ ಮಾಡಲಾಗಿದೆ . ಜೂನ್ 8ರಂದು ಆತನನ್ನು ಶೆಡ್ ನಲ್ಲಿ ಇರಿಸಿ. ಜೂನ್ 09 ರಂದು ಕೊಲೆ ಮಾಡಲಾಗಿದೆ.
ನಟ ದರ್ಶನ್ ಅವರ ಸೂಚನೆ ಮೇರೆಗೆ ಕೊಲೆ ಮಾಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಕೊಲೆ ಪ್ರಕರಣ ವಿಚಾರವಾಗಿ ಇಂದು ಪೊಲೀಸರು ಮೈಸೂರಿನ ದರ್ಶನ್ ಫಾರ್ಮ್ ಹೌಸ್ನಲ್ಲಿ ಬಂಧಿಸಲಾಗಿದೆ.