ಬಾಂಗ್ಲಾದೇಶದ ಪ್ರಜೆ ಶರೀಫುಲ್ ಇಸ್ಲಾಂ ಶೆಹಜಾದ್ ಮೊಹಮ್ಮದ್ ರೋಹಿಲ್ಲಾ ಅಮೀನ್ ಫಕೀರ್ ಅಲಿಯಾಸ್ ವಿಜಯ್ ದಾಸ್ (30) ಅನಾರೋಗ್ಯದಿಂದ ಬಳಲುತ್ತಿರುವ ತನ್ನ ತಾಯಿಯ ಚಿಕಿತ್ಸೆಗೆ ಹಣದ ಅಗತ್ಯವಿರುವ ಕಾರಣ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮನೆಯನ್ನು ದರೋಡೆ ಮಾಡಲು ಪ್ರಯತ್ನಿಸಿದ್ದಾನೆ.
ಹೌದು. ಆರೋಪಿಯು ಕಳೆದ ವರ್ಷ ಡಿಸೆಂಬರ್ನಲ್ಲಿ ಹೌಸ್ ಕೀಪಿಂಗ್ ಕೆಲಸವನ್ನು ಸಹ ಕಳೆದುಕೊಂಡಿದ್ದನು, ಇದರಿಂದಾಗಿ ಆತನ ಬಳಿ ಹಣವಿರಲಿಲ್ಲ ಎಂದು ವರದಿಗಳು ತಿಳಿಸಿವೆ. ಶ್ರೀಮಂತರ ಮನೆಯನ್ನು ಟಾರ್ಗೆಟ್ ಮಾಡಿಕೊಂಡಿದ್ದ ಆರೋಪಿ ಕೊನೆಗೆ ನುಗ್ಗಿದ್ದು ಸೈಫ್ ಮನೆಗೆ.
ಅಪರಾಧದ ನಂತರ ಶರೀಫುಲ್ ಇಸ್ಲಾಂ ಶೆಹಜಾದ್ ಬಾಂಗ್ಲಾದೇಶಕ್ಕೆ ಮರಳಲು ಯೋಜಿಸಿದ್ದನು ಎಂದು ಯಾದ ವರದಿ ಹೇಳಿದೆ. ತಾಯಿಯ ಚಿಕಿತ್ಸೆಗೆ ಹಣದ ಅಗತ್ಯವಿತ್ತು, ಶ್ರೀಮಂತರನ್ನು ದರೋಡೆ ಮಾಡಲು ಯೋಜಿಸಿದ್ದನು ಎಂದು ತನಿಖೆಯಲ್ಲಿ ಬಯಲಾಗಿದೆ.
ಅನಾರೋಗ್ಯದಿಂದ ಬಳಲುತ್ತಿರುವ ತನ್ನ ತಾಯಿಗೆ ಸಹಾಯ ಮಾಡಲು ಶ್ರೀಮಂತರಿಂದ ಹಣ ಕದಿಯುವುದು ಮತ್ತು ಲೂಟಿ ಮಾಡಿ ಬಾಂಗ್ಲಾದೇಶಕ್ಕೆ ಪರಾರಿಯಾಗುವುದು ಮಾತ್ರ ಅವನಿಗೆ ಬೇಕಾಗಿತ್ತು” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಡಿಸೆಂಬರ್ 15 ರಂದು ಥಾಣೆ ರೆಸ್ಟೋರೆಂಟ್ನಲ್ಲಿ ಹೌಸ್ ಕೀಪಿಂಗ್ ಕೆಲಸವನ್ನು ಶೆಹಜಾದ್ ಕಳೆದುಕೊಂಡಿದ್ದು , ತಕ್ಷಣ ಆತನಿಗೆ ಹೊಳೆದಿದ್ದೇ ದರೋಡೆ ಮಾಡುವ ಪ್ಲ್ಯಾನ್.ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಥಾಣೆ ರೆಸ್ಟೋರೆಂಟ್ಗೆ ಸೇರುವ ಮೊದಲು, ಶರೀಫುಲ್ ವರ್ಲಿ ರೆಸ್ಟೋರೆಂಟ್ನಲ್ಲಿ ಕೆಲಸ ಮಾಡುತ್ತಿದ್ದರು, ತಿಂಗಳಿಗೆ 13,000 ರೂ ಸಂಬಳ ಬರುತಿತ್ತು, ಈ ಮೊತ್ತದಿಂದ ತನ್ನ ತಾಯಿಯ ವೈದ್ಯಕೀಯ ಚಿಕಿತ್ಸೆಗಾಗಿ ಬಾಂಗ್ಲಾದೇಶಕ್ಕೆ 12,000 ರೂ.ಗಳನ್ನು ಕಳುಹಿಸುವುದಾಗಿ ಆತ ವಿಚಾರಣೆಯ ಸಮಯದಲ್ಲಿ ಪೊಲೀಸರಿಗೆ ತಿಳಿಸಿದ್ದಾನೆ ಎಂದು ವರದಿ ತಿಳಿಸಿದೆ.