ಗಾಝಾ ಮೇಲೆ ಇಸ್ರೇಲ್ ಪ್ರತಿದಾಳಿ ಬಳಿಕ ಫೆಲೆಸ್ತೀನ್ ಸಾವಿನ ಸಂಖ್ಯೆ 31,645ಕ್ಕೆ ಏರಿಕೆಯಾಗಿದೆ ಎಂದು ಗಾಝಾ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.
ರಾತ್ರಿಯಿಡೀ ಇಸ್ರೇಲ್ ನಡೆಸಿದ ಬಾಂಬ್ ದಾಳಿಯಲ್ಲಿ ಕನಿಷ್ಠ 61 ಫೆಲೆಸ್ತೀನೀಯರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 31,645 ಕ್ಕೆ ಏರಿದೆ ಎಂದು ಗಾಝಾ ಆರೋಗ್ಯ ಸಚಿವಾಲಯ ತಿಳಿಸಿದೆ.
ಕದನ ವಿರಾಮ ಮತ್ತು ಹಮಾಸ್ ಸೆರೆಯಲ್ಲಿರುವ ಕೈದಿಗಳ ಬಿಡುಗಡೆ ಕುರಿತು ಮಾತುಕತೆ ನಡೆಸಲು ಇಸ್ರೇಲ್ ನಿಯೋಗ ಶೀಘ್ರದಲ್ಲೇ ಮತ್ತೆ ದೋಹಾ ತಲುಪಲಿದೆ ಎಂದು ಇಸ್ರೇಲ್ ಮಾಧ್ಯಮ ವರದಿಗಳು ತಿಳಿಸಿವೆ.
“ಐದು ತಿಂಗಳಿಗೂ ಹೆಚ್ಚು ಕಾಲ ಯುದ್ಧ ಮತ್ತು ಇಸ್ರೇಲ್ ಮುತ್ತಿಗೆಗೆ ಗಾಜಾ ಪಟ್ಟಿಯಲ್ಲಿ ಭೀಕರ ಪರಿಸ್ಥಿತಿಗಳಿಗೆ ಕಾರಣವಾಗಿದೆ, ಅಲ್ಲಿ ಕರಾವಳಿ ಪ್ರದೇಶದ 2.4 ಮಿಲಿಯನ್ ಜನರಿಗೆ ಬರಗಾಲದ ಬಗ್ಗೆ ವಿಶ್ವಸಂಸ್ಥೆ ಪದೇ ಪದೇ ಎಚ್ಚರಿಸಿದೆ” ಎಂದು ಮಾಧ್ಯಮ ವರದಿಗಳು ತಿಳಿಸಿವೆ.