ನವದೆಹಲಿ: ನೇಪಾಳದ ತನಾಹುನ್ ಜಿಲ್ಲೆಯ ಮಾರ್ಸ್ಯಾಂಗ್ಡಿ ನದಿಗೆ ಭಾರತೀಯ ನೋಂದಾಯಿತ ಪ್ರಯಾಣಿಕರ ಬಸ್ ಉರುಳಿದ ಪರಿಣಾಮ ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ.
ಸುಮಾರು 40 ಪ್ರಯಾಣಿಕರನ್ನು ಹೊತ್ತ ಬಸ್ ಪೊಖಾರಾದಿಂದ ಕಠ್ಮಂಡುವಿಗೆ ತೆರಳುತ್ತಿತ್ತು. ತನಾಹುನ್ನ ಜಿಲ್ಲಾ ಪೊಲೀಸ್ ಕಚೇರಿಯ ಡಿಎಸ್ಪಿ ದೀಪ್ಕುಮಾರ್ ರಾಯ ಅವರು ಅಪಘಾತವನ್ನು ದೃಢಪಡಿಸಿದರು ಮತ್ತು ಬಸ್ ನದಿಯ ದಡದಲ್ಲಿ ಬಿದ್ದಿತ್ತು ಎಂದು ವರದಿ ತಿಳಿಸಿದೆ.