ವಿಜಯಪುರ : ಮೆಕ್ಕೆಜೋಳ ಸಂಸ್ಕರಣಾ ಘಟಕದಲ್ಲಿ 200ಕ್ಕೂ ಹೆಚ್ಚು ಟನ್ ಜೋಳ ಏಕಾಏಕಿ ಕುಸಿದು ಅದರ ರಾಶಿಯೊಳಗೆ ಕಾರ್ಮಿಕರು ಸಿಲುಕಿದ ಘಟನೆ ವಿಜಯಪುರ ಕೈಗಾರಿಕಾ ಪ್ರದೇಶದ ರಾಜಗುರು ಇಂಡಸ್ಟ್ರಿಸ್ ನಲ್ಲಿ ಸೋಮವಾರ ಸಂಜೆ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಸಾವಿನ ಸಂಖ್ಯೆ 7 ಕ್ಕೇರಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮೆಕ್ಕೆಜೋಳ ಸಂಸ್ಕರಣಾ ಘಟಕದಲ್ಲಿ 8 ಮಂದಿ ಸಿಲುಕಿದ್ದರು. ಅದರಲ್ಲಿ ಒಬ್ಬರನ್ನು ನಿನ್ನೆ ರಕ್ಷಿಸಲಾಗಿದೆ. ಆದರೆ 7 ಮಂದಿ ಪ್ರಾಣ ಕಳೆದುಕೊಂಡಿದ್ದು, ಏಳು ಮಂದಿ ಶವವನ್ನು ಹೊರಕ್ಕೆ ತರಲಾಗಿದೆ.
ದುರಂತದಲ್ಲಿ ಮೃತಪಟ್ಟವರು ಬಿಹಾರ ಮೂಲದ ಕಾರ್ಮಿಕರಾಗಿದ್ದಾರೆ. ಅವಶೇಷಗಳಡಿ ಸಿಲುಕಿ 7 ಜನ ಸಾವನ್ನಪ್ಪಿದ್ದಾರೆ. ರಾಜಗುರು ಫುಡ್ಸ್ ಗೋದಾಮಿನಲ್ಲಿ ಮೆಕ್ಕೆಜೋಳ ಚೀಲಗಳ ರಾಶಿ ಕುಸಿದು ದುರಂತ ಸಂಭವಿಸಿದೆ.