ಮಾಸ್ಕೋ: ಮಾಸ್ಕೋ ಉಪನಗರ ಸಂಗೀತ ಕಚೇರಿ ಸಭಾಂಗಣದ ಮೇಲೆ ಉಗ್ರರು ಶುಕ್ರವಾರ ನಡೆಸಿದ ದಾಳಿಯಲ್ಲಿ ಮೃತರ ಸಂಖ್ಯೆ 93 ಕ್ಕೇರಿದೆ ಎಂದು ವರದಿಗಳು ತಿಳಿಸಿದೆ.
ಉಗ್ರರ ಭೀಕರ ದಾಳಿಗೆ 93 ಜನರು ಸಾವನ್ನಪ್ಪಿದ್ದಾರೆ ಮತ್ತು 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮಾಸ್ಕೋದ ಕ್ರೋಕಸ್ ಸಿಟಿ ಹಾಲ್ ಸಂಗೀತ ಕಚೇರಿ ಸ್ಥಳಕ್ಕೆ ನುಗ್ಗಿದ ಶಸ್ತ್ರಸಜ್ಜಿತ ಉಗ್ರರ ಗುಂಪು ಗುಂಡು ಹಾರಿಸಿ ಸ್ಫೋಟಕಗಳನ್ನು ಸ್ಫೋಟಿಸಿದೆ.
ಮಾಸ್ಕೋದಲ್ಲಿ ನಡೆದ ಮಾರಣಾಂತಿಕ ದಾಳಿಗೆ ಸಂಬಂಧಿಸಿದಂತೆ ನಾಲ್ವರು ದಾಳಿಕೋರರು ಸೇರಿದಂತೆ 11 ಜನರನ್ನು ಬಂಧಿಸಲಾಗಿದೆ ಎಂದು ಯುಎಸ್ಎಸ್ಐಎ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಎಫ್ಎಸ್ಬಿ ಭದ್ರತಾ ಸೇವೆಯ ಮುಖ್ಯಸ್ಥರು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ “ದಾಳಿಯಲ್ಲಿ ನೇರವಾಗಿ ಭಾಗಿಯಾಗಿರುವ ಎಲ್ಲಾ ನಾಲ್ವರು ಭಯೋತ್ಪಾದಕರು ಸೇರಿದಂತೆ 11 ಜನರನ್ನು ಬಂಧಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ” ಎಂದು ರಷ್ಯಾದ ಸರ್ಕಾರಿ ಸುದ್ದಿ ಸಂಸ್ಥೆಗಳು ತಿಳಿಸಿದೆ.