ಮುಂಬೈ : ಮುಂಬೈನ ಅಂಧೇರಿ ಪಶ್ಚಿಮದಲ್ಲಿರುವ ಗಾಯಕ ಉದಿತ್ ನಾರಾಯಣ್ ಅವರ ಅಪಾರ್ಟ್’ಮೆಂಟ್ ಭಾರಿ ಬೆಂಕಿ ಅವಘಡ ಸಂಭವಿಸಿದ್ದು, ಓರ್ವ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಗಾಯಕ ಉದಿತ್ ನಾರಾಯಣ್ ಅವರ ಸ್ಕೈಪಾನ್ ಕಟ್ಟಡದಲ್ಲಿ ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಈ ಕಟ್ಟಡವು ಮುಂಬೈನ ಅಂಧೇರಿಯ ಶಾಸ್ತ್ರಿ ನಗರದಲ್ಲಿದೆ. ಕಟ್ಟಡದಲ್ಲಿದ್ದ ಅಪಾರ್ಟ್ಮೆಂಟ್ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಅಗ್ನಿಶಾಮಕ ದಳಕ್ಕೆ ಬೆಂಕಿ ನಂದಿಸಲು ಸಾಕಷ್ಟು ಸಮಯ ಹಿಡಿದಿದೆ.
#WATCH | Mumbai, Maharashtra: Fire broke out in singer Shaan’s residential building. Fire tenders on the spot. Further details awaited. pic.twitter.com/qWsmCggrf8
— ANI (@ANI) December 23, 2024
ಶಾಸ್ತ್ರಿ ನಗರದ ಸ್ಕೈಪಾನ್ ಅಪಾರ್ಟ್ಮೆಂಟ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ವರದಿಯ ಪ್ರಕಾರ, ಈ ದುರಂತ ಘಟನೆಯಲ್ಲಿ ಉದಿತ್ ನಾರಾಯಣ್ ಅವರ ನೆರೆಮನೆಯ ರಾಹುಲ್ ಮಿಶ್ರಾ (75) ಸಾವನ್ನಪ್ಪಿದ್ದಾರೆ. ಅವರು ಕಟ್ಟಡದ 11 ನೇ ಮಹಡಿಯಲ್ಲಿ ವಾಸಿಸುತ್ತಿದ್ದರು. ಅವರನ್ನು ಕೋಕಿಲಾಬೆನ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ವರದಿಯ ಪ್ರಕಾರ, ರಾಹುಲ್ ಮಿಶ್ರಾ ಅವರ ಫ್ಲ್ಯಾಟ್ನಲ್ಲಿ ಅಳವಡಿಸಲಾದ ವಿದ್ಯುತ್ ನಿಂದಾಗಿ ಈ ಘಟನೆ ಸಂಭವಿಸಿದೆ. ಹೊಗೆಯಿಂದ ಉಸಿರಾಡಲು ಆಗದೇ ಉಸಿರುಗಟ್ಟಿ ಅವರು ಸಾವನ್ನಪ್ಪಿದ್ದಾರೆ.
#WATCH | Mumbai, Maharashtra: Fire broke out in singer Shaan’s residential building. Fire tenders on the spot. Further details awaited. pic.twitter.com/qWsmCggrf8
— ANI (@ANI) December 23, 2024