ಹಾಸನ : ಹಾಸನಾಂಬೆ ದೇಗುಲದಲ್ಲಿ ವಿದ್ಯುತ್ ಅವಘಡ ಸಂಭವಿಸಿದ್ದು, 10 ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಕಿಮ್ಸ್ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಏನಿದು ಘಟನೆ
ಹಾಸನಾಂಬೆ ದೇಗುಲ ಬಳಿ ವಿದ್ಯುತ್ ಅವಘಡದಿಂದ ಕರೆಂಟ್ ಶಾಕ್ ಹೊಡೆದು ನೂಕು ನುಗ್ಗಲು ಆದ ಘಟನೆ ನಡೆದಿದೆ. ಲೈಟಿಂಗ್ ವೈರ್ ತುಂಡಾಗಿ ಕಬ್ಬಿಣದ ಸರಳಿಗೆ ತಗುಲಿದೆ. ನಂತರ ಅಲ್ಲಿದ್ದ ಕಬ್ಬಿಣದ ಬ್ಯಾರಿಕೇಡ್ನಲ್ಲಿ ಸಣ್ಣದಾಗಿ ಕರೆಂಟ್ ಹರಿದಿದೆ. ಪರಿಣಾಮ ಇಬ್ಬರಿಗೆ ಕರೆಂಟ್ ಶಾಕ್ ತಗುಲಿದ್ದು, ಇದರಿಂದ ಆತಂಕಗೊಂಡ ಭಕ್ತಾದಿಗಳು ತಮ್ಮ ಪ್ರಾಣ ಉಳಿಸಿಕೊಳ್ಳಲು ಮಹಿಳೆಯರು, ವೃದ್ಧರು ಸೇರಿ ಭಕ್ತರು ಭಯಗೊಂಡು ಓಡಿ ಹೋಗಿದ್ದಾರೆ. ಸುದ್ದಿ ಕೇಳಿ ಶಾಕ್ ಆದ ಜನರು ಓಡಲು ಶುರು ಮಾಡಿದ್ದು,ಕಾಲ್ತುಳಿತ, ತಳ್ಳಾಟ ನೂಕಾಟ ಉಂಟಾಗಿದೆ.
ಸರತಿ ಸಾಲಿನಲ್ಲಿ ನಿಂತಿದ್ದಾಗ ಕೆಲವರಿಗೆ ಕಬ್ಬಿಣದ ಬ್ಯಾರಿಕೇಟ್ನಲ್ಲಿ ಕರೆಂಟ್ ಪಾಸ್ ಆಗಿ ಕುಸಿದು ಬಿದ್ದಿದ್ದಾರೆ. ಇದರಿಂದಾಗಿ ಆತಂಕಕೊಂಡ ಮಹಿಳೆಯರು ಪ್ರಾಣ ಉಳಿಸಿಕೊಳ್ಳಲು ಬ್ಯಾರಿಕೇಟ್ ಮುರಿದಿದ್ದಾರೆ.