ಕೇರಳದ ವಯನಾಡು ಭೂಕುಸಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 400 ಕ್ಕೆ ಏರಿಕೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ವಯನಾಡು ಭೂಕುಸಿತದಲ್ಲಿ ಇದುವರೆಗೆ 400 ಮಂದಿ ಬಲಿಯಾಗಿದ್ದು, ಕ್ಷಣ ಕ್ಷಣಕ್ಕೂ ಸಾವಿನ ಸಂಖ್ಯೆ ಏರುತ್ತಲೇ ಇದೆ.
ಮಣ್ಣಿನ ಪ್ರವಾಹದಲ್ಲಿ ಕೊಚ್ಚಿ ಹೋದವರು, ನಾಪತ್ತೆಯಾದವರಿಗಾಗಿ ರಕ್ಷಣಾ ಪಡೆಗಳಿಂದ ಶೋಧ ಕಾರ್ಯಾಚರಣೆ ಮುಂದುವರೆದಿದೆ.ಮಣ್ಣು ಮಿಶ್ರಿತ ರಿನಲ್ಲಿz ಕೊಚ್ಚಿ ಹೋದ ಜನರ ಪತ್ತೆಗೆ ರೆಡಾರ್, ಸ್ನೈಪರ್ ಡಾಗ್ ಗಳನ್ನು ಬಳಸಿಕೊಂಡು ಶೋಧ ಕಾರ್ಯಾಚರಣೆ ನಡೆಸಲಾಗಿದೆ.
ಸ್ಥಳದಲ್ಲಿ ಪರಿಹಾರ ಕಾರ್ಯಾಚರಣೆ ಬಿರುಸಿನಿಂದ ಸಾಗಿದ್ದು ತಮ್ಮವರನ್ನು ಕಳೆದುಕೊಂಡವರ ಆಕ್ರಂದನ ಮುಗಿಲು ಮುಟ್ಟಿದೆ.
ಪ್ರಕೃತಿಯ ರೌದ್ರ ನರ್ತನಕ್ಕೆ 400 ಮಂದಿ ಬಾರದ ಲೋಕ ಸೇರಿದ್ದಾರೆ.ಮೃತರ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ವಯನಾಡು ಸಂತ್ರಸ್ತರ ಸಂಕಷ್ಟಕ್ಕೆ ಜನರು ಮಿಡಿದಿದ್ದು, ಹಲವಾರು ನಟ ನಟಿಯರು, ಜನರು ತಮ್ಮ ಕೈಲಾದಷ್ಟು ಹಣ ಸಂದಾಯ ಮಾಡುತ್ತಿದ್ದಾರೆ.