ಬೆಂಗಳೂರು : ಕನ್ನಡಿಗರ ಮೇಲೆ ಹಲ್ಲೆ ಪ್ರಕರಣ ಖಂಡಿಸಿ, ಕನ್ನಡ ನಾಡು, ಭಾಷೆ, ನೆಲ-ಜಲ ರಕ್ಷಣೆಗಾಗಿ ಒತ್ತಾಯಿಸಿ ಮಾರ್ಚ್ 22ರಂದು ಕರ್ನಾಟಕ ಬಂದ್ ಗೆ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳು ಕರೆ ನೀಡಿದೆ.
ಮಾ.22 ರಂದು ಬೆಳಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ಬಂದ್ ಗೆ ಕರೆ ನೀಡಲಾಗಿದೆ. ಕರ್ನಾಟಕ ಬಂದ್ ಗೆ ಯಾರ ಬೆಂಬಲ ಇದೆ. ಏನಿರುತ್ತೆ..ಏನಿರಲ್ಲ..! ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ಏನಿರುತ್ತೆ..?
* ಹೋಟೆಲ್ ಓಪನ್ ಇರುತ್ತದೆ ( ಬಂದ್ ಗೆ ನಮ್ಮ ಬೆಂಬಲವಿದೆ, ಆದರೆ ಹೋಟೆಲ್ ಅಗತ್ಯಸೇವೆಗಳು ಆದ್ದರಿಂದ ಹೋಟೆಲ್ ಬಂದ್ ಮಾಡಲ್ಲ. ನಮ್ಮ ನೈತಿಕ ಬೆಂಬಲವಿದೆ ಎಂದು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಪಿಸಿ ರಾವ್ ತಿಳಿಸಿದ್ದಾರೆ.
* ಅಗತ್ಯ ಪೂರೈಕೆ ಸೇವೆಗಳು ಎಂದಿನಂತೆ ಇರುತ್ತದೆ
* ಹಾಲು, ತರಕಾರಿ, ದಿನಸಿ ಅಂಗಡಿಗಳು
* ಆಸ್ಪತ್ರೆ, ಮೆಡಿಕಲ್ ಸ್ಟೋ್ರ್.
* ರೈಲು ಹಾಗೂ ವಿಮಾನ ಸೇವೆ
ಏನಿರಲ್ಲ..?
* ನಮ್ಮ ಮೆಟ್ರೋ ಸಂಚಾರ ಬಂದ್
* ಆಟೋ, ಟ್ಯಾಕ್ಸಿ ಸಂಚಾರ ಬಂದ್
* ಚಿತ್ರಮಂದಿರಗಳು ಬಂದ್
* ಸಿನಿಮಾ ಶೂಟಿಂಗ್ ಬಂದ್
ಹೋಟೆಲ್, ಮಾಲ್ ಗಳು ಅನುಮಾನ
* ಕೆಎಸ್ ಆರ್ ಟಿಸಿ ಹಾಗೂ ಬಿಎಂಟಿಸಿ ಬಸ್ ಸಂಚಾರ ಬಂದ್
* ಶಾಲಾ ಕಾಲೇಜುಗಳಿಗೆ ರಜೆ ನೀಡುವ ಬಗ್ಗೆ ಹಿಂದಿನ ದಿನ ಆದೇಶ ಹೊರ ಬೀಳುವ ಸಾಧ್ಯತೆಯಿದೆ.
* ಬಾರ್ & ರೆಸ್ಟೋರೆಂಟ್ ಗಳು ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ
* ಎಪಿಎಂಸಿ ( ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ) ಬಂದ್ ಗೆ ಬೆಂಬಲ ಘೋಷಿಸಿದೆ. ಮಾ.22 ರಂದು ಎಪಿಎಂಸಿ ಬಂದ್ ಆಗಲಿದೆ.
ಕರ್ನಾಟಕದಲ್ಲಿರುವ ಬೇರೆ ರಾಜ್ಯದವರು ಕನ್ನಡ ಕಲಿಯಲೇಬೇಕು. ಇಲ್ಲವಾದಲ್ಲಿ ಕರ್ನಾಟಕ ಬಿಟ್ಟು ಹೋಗಬೇಕು ಎಂದು ಆಗ್ರಹಿಸಿದರು.ತಮಿಳರು, ತೆಲುಗು, ಮಲಯಾಳಿಗಳು, ಗುಜರಾತಿಗಳು, ಬಿಹಾರಿಗಳು, ಮಾರ್ವಾಡಿಗರು ಯಾರೇ ಆಗಿರಲಿ ಕನ್ನಡ ಕಲಿಯಲೇಬೇಕು. ಇಲ್ಲದಿದ್ದರೆ ರಾಜ್ಯ ಬಿಟ್ಟು ಹೋಗಬೇಕು ಯಾವುದೇ ಮುಲಾಜಿಲ್ಲ. ನಾವು ಜೈಲಿಗೆ ಹೋದರು ತೊಂದರೆ ಇಲ್ಲ. ಕರ್ನಾಟಕದಲ್ಲಿ ಇರುವುದಾದರೆ ನೀವು ಕನ್ನಡ ಕಲಿಯಲೇಬೇಕು ಎಂದು ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.
.